ADVERTISEMENT

Redmi Note 12: 200 ಮೆಗಾಪಿಕ್ಸೆಲ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲಿದೆ ರೆಡ್ಮಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಡಿಸೆಂಬರ್ 2022, 8:47 IST
Last Updated 12 ಡಿಸೆಂಬರ್ 2022, 8:47 IST
   

ಬೆಂಗಳೂರು: ಶಓಮಿ ರೆಡ್ಮಿ ಮತ್ತು ಎಂಐ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳ ಮೂಲಕ ದೇಶದ ಗ್ಯಾಜೆಟ್‌ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಈ ಬಾರಿ ಶಓಮಿ, ರೆಡ್ಮಿ ನೋಟ್ ಸರಣಿಯಲ್ಲಿ ಹೊಸ ಮಾದರಿಗಳನ್ನು ಪರಿಚಯಿಸಲು ಮುಂದಾಗಿದೆ.

ಶಓಮಿ ರೆಡ್ಮಿ ನೋಟ್ 12, ನೋಟ್ 12 ಪ್ರೊ ಮತ್ತು ನೋಟ್ 12 ಪ್ರೊ ಪ್ಲಸ್ ಎಂಬ ಮೂರು ಆಕರ್ಷಕ ಸ್ಮಾರ್ಟ್‌ಫೋನ್ ಜನವರಿ 5, 2023ರಂದು ಬಿಡುಗಡೆಯಾಗಲಿದೆ ಎಂದು ಕಂಪನಿ ಹೇಳಿದೆ.

200 ಮೆಗಾಪಿಕ್ಸೆಲ್ ಕ್ಯಾಮೆರಾ
ಶಓಮಿ ರೆಡ್ಮಿ ನೋಟ್ 12 ಪ್ರೊ ಪ್ಲಸ್ ಸ್ಮಾರ್ಟ್‌ಫೋನ್‌ನಲ್ಲಿ ದೇಶದಲ್ಲೇ ಮೊದಲ ಬಾರಿಗೆ 200 ಮೆಗಾಪಿಕ್ಸೆಲ್ ಕ್ಯಾಮೆರಾ ಇರಲಿದೆ ಎಂದು ಶಓಮಿ ತಿಳಿಸಿದೆ.

ADVERTISEMENT

ಅದರ ಜತೆಗೆ, 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಇರಲಿದೆ.

ಮೀಡಿಯಾಟೆಕ್ ಡೈಮೆನ್ಸಿಟಿ 1080 ಒಕ್ಟಾ ಕೋರ್ ಪ್ರೊಸೆಸರ್, 8GB/12GB RAM, 128GB/256GB ಸ್ಟೋರೇಜ್ ಇರಲಿದೆ. ಆ್ಯಂಡ್ರಾಯ್ಡ್ 12 ಆಧಾರಿತ ಐಂಐ13 ಓಎಸ್, 5,000mAh ಬ್ಯಾಟರಿ ಮತ್ತು 120W ಚಾರ್ಜಿಂಗ್ ಬೆಂಬಲ, 6.67 ಇಂಚಿನ ಫುಲ್‌ಎಚ್‌ಡಿ+ ಡಿಸ್‌ಪ್ಲೇ ಇರಲಿದೆ.

ಬೆಲೆ ವಿವರವನ್ನು ಕಂಪನಿ ಬಿಡುಗಡೆ ಮಾಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.