ADVERTISEMENT

ISRO | Chandrayaan-3: ಚಂದ್ರಯಾನ 3ರ ಪಯಣದ ಹಾದಿ

ಪ್ರಜಾವಾಣಿ ವಿಶೇಷ
Published 24 ಆಗಸ್ಟ್ 2023, 4:49 IST
Last Updated 24 ಆಗಸ್ಟ್ 2023, 4:49 IST
‘ಚಂದ್ರಯಾನ–3’ರ ಲ್ಯಾಂಡರ್‌ನಲ್ಲಿರುವ ಕ್ಯಾಮೆರಾ (ಎಲ್‌1) ಸೆರೆಹಿಡಿದಿರುವ ಭೂಮಿಯ ಚಿತ್ರ –ಪಿಟಿಐ ಚಿತ್ರ
‘ಚಂದ್ರಯಾನ–3’ರ ಲ್ಯಾಂಡರ್‌ನಲ್ಲಿರುವ ಕ್ಯಾಮೆರಾ (ಎಲ್‌1) ಸೆರೆಹಿಡಿದಿರುವ ಭೂಮಿಯ ಚಿತ್ರ –ಪಿಟಿಐ ಚಿತ್ರ    
  • ಜುಲೈ 14: ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲ್ಯಾಂಡರ್‌ ಮತ್ತು ರೋವರ್‌ ಹೊತ್ತ ‘ಎಲ್‌ವಿಎಂ3 ಎಂ4 ರಾಕೆಟ್‌’ನ ಯಶಸ್ವಿ ಉಡ್ಡಯನ

  • ಜುಲೈ 15: ಬೆಂಗಳೂರಿನಲ್ಲಿರುವ ಇಸ್ರೊದ ಟೆಲಿಮೆಟ್ರಿ, ಟ್ರ್ಯಾಕಿಂಗ್ ಮತ್ತು ಕಮಾಂಡ್ ನೆಟ್‌ವರ್ಕ್ (ಐಎಸ್‌ಟಿಆರ್‌ಎಸಿ) ಕೇಂದ್ರದಿಂದ ಭೂಕಕ್ಷೆಯಲ್ಲಿ ಪರಿಭ್ರಮಿಸುತ್ತಿದ್ದ ಗಗನನೌಕೆಯ ಕಕ್ಷೆ ಬದಲಿಸುವ ಮೊದಲ ಪ್ರಯತ್ನ ಯಶಸ್ವಿ(41,762 ಕಿ.ಮೀ x 173 ಕಿ.ಮೀ)

  • ಜುಲೈ 17: ಎರಡನೇ ಹಂತದ ಕಕ್ಷೆ ಬದಲಾವಣೆ ಪ್ರಕ್ರಿಯೆ ಪೂರ್ಣ (41,603 ಕಿ.ಮೀx226 ಕಿ.ಮೀ)

    ADVERTISEMENT
  • ಜುಲೈ 22: ಭೂಕಕ್ಷೆಯಲ್ಲಿ ಪರಿಭ್ರಮಿಸುತ್ತಿದ್ದ ಗಗನನೌಕೆಯ ಕಕ್ಷೆ ಬದಲಿಸುವ ಮೂರನೇ ಹಂತದ ಪ್ರಕ್ರಿಯೆ ಯಶಸ್ವಿ

ಚಂದ್ರಯಾನ–3
  • ಜುಲೈ 25: ಕಕ್ಷೆ ಬದಲಾಯಿಸುವ ನಾಲ್ಕನೇ ಹಂತದ ಪ್ರಕ್ರಿಯೆ ಪೂರ್ಣ (71,351 ಕಿ.ಮೀx233 ಕಿ.ಮೀ)

  • ಆಗಸ್ಟ್‌ 1: ಭೂಕಕ್ಷೆಯಿಂದ ಚಂದ್ರನ ಕಕ್ಷೆಯತ್ತ ಬಾಹ್ಯಾಕಾಶ ನೌಕೆಯ ‍ಪಯಣ ಆರಂಭ (288 ಕಿ.ಮೀx36,9328 ಕಿ.ಮೀ)

  • ಆಗಸ್ಟ್‌ 5: ಚಂದ್ರನ ಕಕ್ಷೆಗೆ ಗಗನನೌಕೆಯ ಸೇರ್ಪಡೆ ಯಶಸ್ವಿ (164 ಕಿ.ಮೀx18,074 ಕಿ.ಮೀ)

  • ಆಗಸ್ಟ್‌ 6: ಚಂದ್ರನ ಕಕ್ಷೆಯಲ್ಲಿನ ನೌಕೆಯ ವೇಗ ಕಡಿಮೆಗೊಳಿಸಿದ ದಿನ. ಚಂದಿರನ ಕಕ್ಷೆ ಪ್ರವೇಶಿಸಿದ ತಕ್ಷಣವೇ ನೌಕೆಯು ಚಂದ್ರನ ಮೇಲ್ಮೈ ಚಿತ್ರವನ್ನು ಭೂಮಿಗೆ ರವಾನಿಸಿತು. ಇಸ್ರೊ ಇದರ ವಿಡಿಯೊ ಹಂಚಿಕೊಂಡಿತು

ಭಾರತದ ಚಂದ್ರಯಾನ-3 ಯೋಜನೆ ಯಶಸ್ವಿ - ಇಸ್ರೊ ಘೋಷಣೆ
  • ಆಗಸ್ಟ್‌ 9: ನೌಕೆಯ ವೇಗವನ್ನು ನಿಧಾನವಾಗಿ ತಗ್ಗಿಸುವಲ್ಲಿ ಇಸ್ರೊ ಯಶಸ್ವಿ (174 ಕಿ.ಮೀx1,437 ಕಿ.ಮೀ)

  • ಆಗಸ್ಟ್‌ 14: ಚಂದಿರನ ಕಕ್ಷೆಯಲ್ಲಿನ ನೌಕೆಯ ವೇಗವನ್ನು ತಗ್ಗಿಸುವ ಮತ್ತೊಂದು ಹಂತದ ಪ್ರಕ್ರಿಯೆ ಪೂರ್ಣ (151 ಕಿ.ಮೀx179 ಕಿ.ಮೀ)

  • ಆಗಸ್ಟ್ 16: ನೌಕೆಯ ವೇಗ ನಿಧಾನಗೊಳಿಸುವ ಪ್ರಕ್ರಿಯೆ ಯಶಸ್ವಿ (153 ಕಿ.ಮೀx 163 ಕಿ.ಮೀ)

  • ಆಗಸ್ಟ್‌ 17: ಪ್ರೊಪಲ್ಷನ್‌ ಮಾಡ್ಯೂಲ್‌ನಿಂದ (ನೋದನ ಘಟಕ) ಯಶಸ್ವಿಯಾಗಿ ಬೇರ್ಪಟ್ಟ ಲ್ಯಾಂಡರ್‌ ವಿಕ್ರಮ್‌

ಚಂದ್ರಯಾನ–2 ಆರ್ಬಿಟರ್‌–
  • ಆಗಸ್ಟ್‌ 19: ಇಸ್ರೊದಿಂದ ಲ್ಯಾಂಡರ್‌ನ ಡಿಬೂಸ್ಟ್‌(ವೇಗ ತಗ್ಗಿಸುವಿಕೆ) ಪ್ರಕ್ರಿಯೆ ಯಶಸ್ವಿ (113 ಕಿ.ಮೀx157 ಕಿ.ಮೀ)

  • ಆಗಸ್ಟ್‌ 20: ಮತ್ತೊಂದು ಹಂತದಲ್ಲಿ ಲ್ಯಾಂಡರ್‌ ವೇಗ ತಗ್ಗಿಸಿದ ಇಸ್ರೊ (25 ಕಿ.ಮೀx 134 ಕಿ.ಮೀ)

  • ಆಗಸ್ಟ್‌ 21: ‘ಸ್ವಾಗತ ಗೆಳೆಯ!’ ಎಂದು ಚಂದ್ರಮಂಡಲದಲ್ಲಿ ಚಂದ್ರಯಾನ–3ರ ‘ಲ್ಯಾಂಡರ್‌’ಗೆ ಆತ್ಮೀಯವಾಗಿ ಸ್ವಾಗತ ಕೋರಿದ ಚಂದ್ರಯಾನ–2ರ ಕಕ್ಷೆಗಾಮಿ (ಆರ್ಬಿಟರ್‌). ಎರಡೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡ ಖುಷಿ ಹಂಚಿಕೊಂಡ ಇಸ್ರೊ

  • ಆಗಸ್ಟ್‌ 22: ಚಂದ್ರನಲ್ಲಿ ಸಾಫ್ಟ್‌ ಲ್ಯಾಂಡಿಂಗ್‌ಗೆ ಸ್ಥಳ ಹುಡುಕಾಟ ನಡೆಸುತ್ತಿದ್ದ ಲ್ಯಾಂಡರ್‌ಗೆ ಅಳವಡಿಸಿದ್ದ ಕ್ಯಾಮೆರಾದಿಂದ ತೆಗೆದ ಚಿತ್ರಗಳನ್ನು ಬಿಡುಗಡೆಗೊಳಿಸಿದ ಇಸ್ರೊ, ಅದೇ ದಿನದಂದು ಚಂದ್ರನಿಂದ 70 ಕಿ.ಮೀ ಅಂತರಕ್ಕೆ ಲ್ಯಾಂಡರ್‌ಅನ್ನು ಇಳಿಸಿತು

  • ಆಗಸ್ಟ್‌ 23: ಚಂದಿರನ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿದ ಲ್ಯಾಂಡರ್ ‘ವಿಕ್ರಮ್‌’

‘ಚಂದ್ರಯಾನ–3’ರ ನೋದನ ಘಟಕದಿಂದ ಗುರುವಾರ ಬೇರ್ಪಟ್ಟ ನಂತರ ಲ್ಯಾಂಡರ್‌ ಘಟಕದಲ್ಲಿನ ಕ್ಯಾಮೆರಾ (ಎಲ್‌ಐ) ಸೆರೆಹಿಡಿದಿರುವ ಚಂದ್ರನ ಮೇಲ್ಮೈ ಚಿತ್ರವನ್ನು ಇಸ್ರೊ ಬಿಡುಗಡೆ ಮಾಡಿದೆ –ಪಿಟಿಐ ಚಿತ್ರ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.