
ಇಸ್ರೊ
ಬೆಂಗಳೂರು: ಸಣ್ಣ ಉಪಗ್ರಹ ಉಡ್ಡಯನ ವಾಹನಗಳ (ಎಸ್‌ಎಸ್‌ಎಲ್‌ವಿ) ಮೂರನೇ ಹಂತದ ಪರೀಕ್ಷೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಯಶಸ್ವಿಯಾಗಿ ನಡೆಸಿದೆ.
ಆಂಧ್ರಪ್ರದೇಶದ ಶ್ರೀಹರಿಕೋಟದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಸಾಲಿಡ್ ಮೋಟಾರ್ ಸ್ಟ್ಯಾಟಿಕ್ ಪರೀಕ್ಷೆ ಕೇಂದ್ರದಲ್ಲಿ ಈ ಸ್ಟ್ಯಾಟಿಕ್ ಪರೀಕ್ಷೆಯನ್ನು ನಡೆಸಲಾಯಿತು.
ಎಸ್‌ಎಸ್‌ಎಲ್‌ವಿ, ಇಸ್ರೊ ಅಭಿವೃದ್ಧಿಪಡಿಸಿದ ಮೂರು ಹಂತದ ಸಾಲಿಡ್ ಲಾಂಚ್ ವೆಹಿಕಲ್ ಆಗಿದೆ. ಇದು ಕೈಗಾರಿಕೋದಮ್ಯಕ್ಕೆ ಹೆಚ್ಚಿನ ಅನುಕೂಲವಾಗಲಿದ್ದು, ಬೇಡಿಕೆಯ ಮೇರೆಗೆ ತ್ವರಿತವಾಗಿ ಉಡಾವಣೆಗಳನ್ನು ಪೂರೈಸಬಹುದಾಗಿದೆ.
ಇದರೊಂದಿಗೆ ಎಸ್‌ಎಸ್‌ಎಲ್‌ವಿ ಕಾರ್ಯಕ್ಷಮತೆಯನ್ನು 90ಕೆ.ಜಿಗೆ ಸುಧಾರಿಸಿದೆ.
ಜಾಗತಿಕವಾಗಿ ಸಣ್ಣ ಉಪಗ್ರಹಗಳ ಉಡಾವಣೆಗೆ ಭಾರಿ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ವಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.