ADVERTISEMENT

ಸೂರ್ಯನ ಸ್ಥಿತಿಗತಿ ಅರಿವಿಗೆ ನಾಸಾ ಯತ್ನ

ಪಿಟಿಐ
Published 10 ಫೆಬ್ರುವರಿ 2020, 17:49 IST
Last Updated 10 ಫೆಬ್ರುವರಿ 2020, 17:49 IST
ಸೂರ್ಯ
ಸೂರ್ಯ   

ವಾಷಿಂಗ್ಟನ್‌: ಸೂರ್ಯ ಗ್ರಹದ ಚಿತ್ರಣವನ್ನು ಇದೇ ಮೊದಲ ಬಾರಿಗೆ ಮನುಕುಲಕ್ಕೆ ಒದಗಿಸುವ ಉದ್ದೇಶದಿಂದ ಬಾಹ್ಯಾಕಾಶ ನೌಕೆಯನ್ನು ನಾಸಾ ಸೋಮವಾರ ಐರೋಪ್ಯ ಬಾಹ್ಯಾಕಾಶ ಸಂಸ್ಥೆಗಳ (ಇಎಸ್‌ಎ) ಸಹಯೋಗದಲ್ಲಿ ಉಡಾವಣೆ ಮಾಡಿತು.

ಫ್ಲೊರಿಡಾದ ಕೇಪ್‌ ಕನವರೆಲ್‌ ವಾಯುಪಡೆ ಕೇಂದ್ರದ ಉಡಾವಣಾ ಕೇಂದ್ರದಿಂದ ಅಟ್ಲಸ್‌ ವಿ ರಾಕೆಟ್ ಅನ್ನು ಅಂತರಿಕ್ಷಕ್ಕೆ ಉಡಾವಣೆ ಮಾಡಲಾಯಿತು ಎಂದು ನಾಸಾದ ಹೇಳಿಕೆ ನೀಡಿದೆ.ಬಾಹ್ಯಾಕಾಶ ನೌಕೆಯ ಸೋಲಾರ್‌ ಪಾನೆಲ್‌ಗಳನ್ನು ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿದೆ ಎಂಬ ಸೂಚನೆಗಳನ್ನು ಜರ್ಮನಿಯಲ್ಲಿ ಐರೋಪ್ಯ ಬಾಹ್ಯಾಕಾಶ ನಿರ್ವಹಣೆ ಕೇಂದ್ರದಲ್ಲಿನ ಮಿಷನ್‌ ಕಂಟ್ರೋಲ್‌ ವ್ಯವಸ್ಥೆಯಿಂದ ಸ್ವೀಕರಿಸಲಾಗಿದೆ.

ಮೊದಲ ಎರಡು ದಿನದಲ್ಲಿ ಸೋಲಾರ್ ಕಕ್ಷೆಗೆ ವಿವಿಧ ಆ್ಯಂಟೆನಾಗಳು ಮತ್ತು ಪರಿಕರಗಳನ್ನು ನಿಯೋಜಿಸಿ ಭೂಮಿಯೊಂದಿಗೆ ಸಂಪರ್ಕ ಹೊಂದಲಾಗುತ್ತದೆ. ಇದು, ವೈಜ್ಞಾನಿಕ ಅಂಕಿ ಅಂಶ ಸಂಗ್ರಹಿಸಲು ಸಹಕಾರಿಯಾಗಲಿದೆ ಎಂದು ನಾಸಾ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.