ಬೆಂಗಳೂರು:ಖಗೋಳ ಕೌತುಕದ ಅಪರೂಪದ ದೃಶ್ಯಗಳನ್ನು, ಅದರಲ್ಲೂ ಇಂದು ನಡೆಯುವ ಚಂದ್ರ ಗ್ರಹಣದ ವಿಕ್ಷಣೆಗೆ ಎಲ್ಲರೂ ಕಾತುರದಿಂದ ಕಾದಿದ್ದೇವೆ. ಈ ಅಪರೂಪದ ಕ್ಷಣಗಳನ್ನು ವೀಕ್ಷಿಸಲು ಬಾಹ್ಯಾಕಾಶ ನಾಸಾ ಸಂಸ್ಥೆ ನೇರ ಪ್ರಸಾರ ಮಾಡಲಿದೆ.
ಚಂದ್ರ ಗ್ರಹಣದ ಪ್ರತಿ ಕ್ಷಣದ ಮಾಹಿತಿಯ ನೇರ ಪ್ರಸಾರವನ್ನುNASA Live ನಲ್ಲಿ ನೀಡಲಿದೆ.
ಇಂದು(ಜುಲೈ 27) ಚಂದ್ರಗ್ರಹಣ. ನಮ್ಮ ದೇಶದಲ್ಲಿ ರಾತ್ರಿ 11.44ರಿಂದ ಆರಂಭವಾಗುವ ಇದು ಈ ಶತಮಾನದ ಅತ್ಯಂತ ದೀರ್ಘಾವಧಿಯ (103 ನಿಮಿಷಗಳ) ಚಂದ್ರಗ್ರಹಣ.
ಸಾಲದ್ದಕ್ಕೆ ಗ್ರಹಣದ ಅವಧಿಯಲ್ಲಿ ಚಂದ್ರಬಿಂಬ ಈ ಬಾರಿ ಕೆಂಬಣ್ಣಕ್ಕೆ ತಿರುಗಲಿದೆ ಎಂದು ಖಗೋಲವಿಜ್ಞಾನಿಗಳು ಹೇಳುತ್ತಿದ್ದಾರೆ. ಸರಳವಾಗಿ ‘ರೆಡ್ ಮೂನ್’ ಎಂದು ಹೇಳುವ ಬದಲು ‘ಬ್ಲಡ್ ಮೂನ್’ (ರಕ್ತ ಚಂದ್ರ) ಎಂದು ಅದನ್ನು ಬಣ್ಣಿಸಿದ್ದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಕಂಗಾಲು ಹಬ್ಬಿಸುವ ಯತ್ನಗಳು ನಡೆಯುತ್ತಿವೆ.
* ಇವನ್ನೂ ಓದಿ...
*ಬಾನಲ್ಲಿ ಕೆಂಪುಚಂದ್ರ, ಜ್ಯೋತಿಷ್ಯಕ್ಕೆ ಅರ್ಧಚಂದ್ರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.