ADVERTISEMENT

ಬಾಹ್ಯಾಕಾಶ ನಿಲ್ದಾಣದಿಂದ ನಿರ್ಗಮಿಸುವ ಮುನ್ನ ಫೋಟೊಗೆ ಪೋಸ್‌ ಕೊಟ್ಟ ಸುನಿತಾ, ಬುಚ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಮಾರ್ಚ್ 2025, 7:14 IST
Last Updated 18 ಮಾರ್ಚ್ 2025, 7:14 IST
<div class="paragraphs"><p>ಫೋಟೊಗೆ ಪೋಸ್‌ ನೀಡುತ್ತಿರುವ ಸುನಿತಾ, ಬುಚ್‌</p></div>

ಫೋಟೊಗೆ ಪೋಸ್‌ ನೀಡುತ್ತಿರುವ ಸುನಿತಾ, ಬುಚ್‌

   

ನಾಸಾ ವಿಡಿಯೊ (ಸ್ಕ್ರೀನ್‌ಗ್ರ್ಯಾಬ್)

ಫ್ಲಾರಿಡಾ(ಅಮೆರಿಕ): 9 ತಿಂಗಳಿಗೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) ಸಿಲುಕಿಕೊಂಡಿರುವ ಗಗನಯಾತ್ರಿಗಳಾದ ಭಾರತ ಮೂಲದ ಸುನಿತಾ ವಿಲಿಯಮ್ಸ್ ಮತ್ತು ಅಮೆರಿಕದ ಬುಚ್ ವಿಲ್ಮೋರ್ ಇಂದು ಭೂಮಿಗೆ ಪ್ರಯಾಣ ಬೆಳೆಸಿದ್ದಾರೆ.

ADVERTISEMENT

ಅನ್‌ಡಾಕ್‌ ಪ್ರಕ್ರಿಯೆ ವಿಡಿಯೊವನ್ನು ನಾಸಾ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಬಾಹ್ಯಾಕಾಶ ನೌಕೆ ‘ಡ್ರ್ಯಾಗನ್‌’ ಪ್ರವೇಶಿಸುವ ಮುನ್ನ ಇಬ್ಬರು ಗಗನಯಾತ್ರಿಗಳು ಫೋಟೊಗೆ ಪೋಸ್‌ ನೀಡಿದ್ದಾರೆ.

ಇಂದು (ಮಂಗಳವಾರ) ಬೆಳಿಗ್ಗೆ 10.35ಕ್ಕೆ ಬಾಹ್ಯಾಕಾಶ ನಿಲ್ದಾಣದಿಂದ ಬಾಹ್ಯಾಕಾಶ ನೌಕೆ ‘ಡ್ರ್ಯಾಗನ್‌’ ಬೇರ್ಪಟ್ಟಿದ್ದು, ಬುಧವಾರ ಬೆಳಗಿನ ಜಾವ ಸುಮಾರು 3.27 ಸುಮಾರಿಗೆ ಭೂಮಿಗೆ ತಲುಪಲಿದೆ ಎಂದು ನಾಸಾ ತಿಳಿಸಿದೆ.

ಸ್ಪೇಸ್‌ಎಕ್ಸ್‌ನ ‘ಡ್ರ್ಯಾಗನ್‌’ ನೌಕೆ ಭಾನುವಾರ ಐಎಸ್‌ಎಸ್‌ ತಲುಪಿತ್ತು.

ಕಳೆದ ವರ್ಷ ಜೂನ್‌ 5ರಂದು ಸುನಿತಾ ಹಾಗೂ ಬುಚ್‌ ಅವರು ಬೋಯಿಂಗ್‌ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಐಎಸ್‌ಎಸ್‌ನತ್ತ ಪ್ರಯಾಣ ಬೆಳೆಸಿದ್ದರು. 8 ದಿನಗಳ ನಂತರ ಅವರು ಭೂಮಿಗೆ ಮರಳಬೇಕಿತ್ತು. ಆದರೆ, ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಅವರಿಗೆ ಮರಳಲು ಸಾಧ್ಯವಾಗದೆ ಅಲ್ಲೇ ಉಳಿದುಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.