ADVERTISEMENT

ಬಿಕಿನಿ ಧರಿಸಿದವರಿಗೆ ಉಚಿತ ಪೆಟ್ರೋಲ್ ಆಫರ್ ನೀಡಿದ ಬಂಕ್: ಮುಂದೇನಾಯ್ತು?

ರಷ್ಯಾದ ಸಮಾರ ನಗರದಲ್ಲಿ ನಡೆದದ್ದೇನು?

ಏಜೆನ್ಸೀಸ್
Published 18 ನವೆಂಬರ್ 2019, 13:18 IST
Last Updated 18 ನವೆಂಬರ್ 2019, 13:18 IST
   

ಮಾಸ್ಕೊ:ಬಿಕಿನಿ ಧರಿಸಿ ಬಂದವರಿಗೆ ಉಚಿತವಾಗಿ ಪೆಟ್ರೋಲ್ ನೀಡಲಾಗುವುದು! ಹೀಗೊಂದು ಆಫರ್ ನೀಡಿದ್ದು ರಷ್ಯಾದ ಸಮಾರ ನಗರದ ಒಲ್ವಿ ಪೆಟ್ರೋಲ್ ಬಂಕ್. ಬಂಕ್‌ಗೆ ಪ್ರಚಾರ ದೊರೆಯುವುದಕ್ಕೋಸ್ಕರ ಅದರ ಮಾಲೀಕ ಮಾಡಿದ ಈ ಐಡಿಯಾ ಇದೀಗ ಟ್ವಿಟರ್‌ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಕಾರಣವಿಷ್ಟೆ. ಉಚಿತ ಪೆಟ್ರೋಲ್‌ ಪಡೆಯುವುದಕ್ಕಾಗಿಅನೇಕ ಯುವಕರೂ ಬಿಕಿನಿ ಧರಿಸಿ ಬಂಕ್‌ಗೆ ಬಂದಿದ್ದಾರೆ! ಟ್ವಿಟರ್‌ನಲ್ಲಿ#BikiniDress ಟ್ರೆಂಡ್ ಆಗಿದೆ. ಅನೇಕ ಟ್ವಿಟರ್‌ ಬಳಕೆದಾರರು ಹಾಸ್ಯಮಯ ಸಂದೇಶಗಳನ್ನು ಪ್ರಕಟಿಸಿದ್ದಾರೆ.

‘ಬಿಕಿನಿ ಧರಿಸಿ ಬಂದವರಿಗೆ ಉಚಿತವಾಗಿ ಪೆಟ್ರೋಲ್ ನೀಡುವ ಆಫರ್ ಮೂಲಕ ಹೆಚ್ಚಿನ ಪ್ರಚಾರ ಪಡೆಯಬಹುದು ಎಂದು ನಾವು ಭಾವಿಸಿದ್ದೆವು. ಇಂಧನಕ್ಕಾಗಿ ಪುರುಷರೂ ಬಿಕಿನಿ ಧರಿಸಿ ಬರಬಹುದೆಂದು ನಿರೀಕ್ಷಿಸಿರಲಿಲ್ಲ. ಆದರೆ, ಹಾಗೆಯೇ ಆಯಿತು’ ಎಂದುಪೆಟ್ರೋಲ್ ಬಂಕ್ ಮಾಲೀಕರು ಹೇಳಿದ್ದಾರೆ.

ADVERTISEMENT

ಕೆಲವು ಪುರುಷರು ಬಿಕಿನಿ ಜತೆಗೆ ಹೈಹೀಲ್ಡ್ ಚಪ್ಪಲಿ ಸಹ ಧರಿಸಿಕೊಂಡು ಕೂಡ ಬಂದಿದ್ದರು.

ಟ್ವಿಟರ್ ಚಿತ್ರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.