ADVERTISEMENT

ಪದೇ ಪದೇ ಕೆಲಸ ಬದಲಾಯಿಸುವ GenZಗಳ ಬಗ್ಗೆ ಉದ್ಯಮಿ ಅನುಪಮ್ ಮಿತ್ತಲ್‌ ಹೇಳಿದ್ದೇನು?

ಏಜೆನ್ಸೀಸ್
Published 3 ಫೆಬ್ರುವರಿ 2026, 6:52 IST
Last Updated 3 ಫೆಬ್ರುವರಿ 2026, 6:52 IST
<div class="paragraphs"><p>ಉದ್ಯಮಿ ಅನುಪಮ್ ಮಿತ್ತಲ್‌</p></div>

ಉದ್ಯಮಿ ಅನುಪಮ್ ಮಿತ್ತಲ್‌

   

ಇನ್‌ಸ್ಟಾಗ್ರಾಂ ಚಿತ್ರ

ಈಗೇನಿದ್ದರೂ ಝೆನ್‌– ಜಿಗಳ ಜಮಾನ. ಉದ್ಯೋಗ ಕ್ಷೇತ್ರದಲ್ಲಿ ಹೊಸ ತಲೆಮಾರಿನ ಯುವಜನತೆಯದ್ದೇ ಕಾರುಬಾರು. ಆದರೆ ಈ ಝೆನ್‌- ಜಿಗಳು ಒಂದು ಕಂಪನಿಗೆ ಸೇರಿದರೆ ವರ್ಷದ ಅಂತರದಲ್ಲೇ ಕೆಲಸ ಬಿಟ್ಟು ಹೊಸ ಕಂಪನಿಯನ್ನು ಸೇರಿಕೊಳ್ಳುತ್ತಾರೆ ಎನ್ನುವ ಆರೋಪಗಳು ಹೆಚ್ಚು ಕೇಳಿಬರುತ್ತಿವೆ.

ADVERTISEMENT

ಈ ನಡುವೆ ಪೀಪಲ್‌ ಗ್ರೂಪ್‌ ಮತ್ತು ಶಾದಿ ಡಾಟ್‌ ಕಾಮ್‌ನ ಸಿಇಒ ಆಗಿರುವ ಶಾರ್ಕ್‌ ಟ್ಯಾಂಕ್‌ ಕಾರ್ಯಕ್ರಮದ ತೀರ್ಪುಗಾರ ಅನುಪಮ್ ಮಿತ್ತಲ್‌, ಝೆನ್‌ –ಜಿ ಪರ ವಹಿಸಿ ಮಾತನಾಡಿದ್ದಾರೆ. 

‘ಪದೇ ಪದೇ ಕೆಲಸ ಬದಲಾಯಿಸಿದ್ದಕ್ಕಾಗಿ ಝೆನ್‌–ಜಿಗಳನ್ನು ಅವಮಾನಿಸುವುದನ್ನು ನಿಲ್ಲಿಸೋಣ. 22 ವರ್ಷ ವಯಸ್ಸಿನವರ ಕೆಲಸ ಬದಲಾವಣೆ ಪ್ರವತ್ತಿ ಬಗ್ಗೆ ‘ವೃತ್ತಿ ಗುರುಗಳು’ (ವೃತ್ತಿಯಲ್ಲಿ ಹಿರಿಯರಾದವರು) ನಾಚಿಕೆಯಾಗುವಂತೆ ಮಾತನಾಡುವುದನ್ನು ನಾನು ನೋಡಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

‘ವೃತ್ತಿಯ ಆರಂಭದಲ್ಲಿ ಪ್ಯಾಷನ್‌ ಏನು ಎನ್ನುವುದನ್ನು ಅನ್ವೇಷಿಸುತ್ತೇವೆ. ಕೆಲಸ ಸರಿ ಎನ್ನಿಸಲಿಲ್ಲವಾದರೆ ಹಿಂದೆ ಸರಿದುಬಿಡಿ. ಅದರ ಬಗ್ಗೆ ಕೆಟ್ಟದಾಗಿ ಭಾವಿಸಬೇಡಿ. ಇದು ಅನ್ವೇಷಿಸುವ ಸಮಯ ಎಂದುಕೊಳ್ಳಿ. ಆದರೆ ಒಂದು ಬಾರಿ ನಿಮ್ಮ ದಾರಿಯನ್ನು ಕಂಡುಕೊಂಡ ಮೇಲೆ ಒಂದು ಕೆಲಸದಿಂದ ಇನ್ನೊಂದು ಕೆಲಸಕ್ಕೆ ಹಾರುವುದನ್ನು ಬಿಟ್ಟು ಗಟ್ಟಿಯಾಗಿ ನಿಲ್ಲುವುದನ್ನು ಅಭ್ಯಸಿಸಿಕೊಳ್ಳಿ’ ಎಂದು ಸಲಹೆ ನೀಡಿದ್ದಾರೆ. 

‘ನನ್ನ ಕಂಪನಿಗೆ ಅನುಭವಿ ವ್ಯಕ್ತಿಗಳನ್ನು ನೇಮಕ ಮಾಡುವಾಗ ಕನಿಷ್ಠ 4–5 ವರ್ಷಗಳ ಅನುಭವವಿಲ್ಲದ ರೆಸ್ಯೂಮ್ ಅನ್ನು ತಿರಸ್ಕರಿಸುತ್ತೇನೆ. ಏಕೆಂದರೆ, ಸಾಮಾನ್ಯವಾಗಿ, ಒಬ್ಬರು ತಮ್ಮ ಸ್ವಂತ ನಿರ್ಧಾರಗಳ ಪರಿಣಾಮಗಳನ್ನು 12 ತಿಂಗಳುಗಳ ಕಾಲ ನಿಲ್ಲುವುದಿಲ್ಲ ಎಂದರೆ ಕಷ್ಟ. ಆದರೆ 20ರ ಹರೆಯದವರು ಕೆಲಸ ಬದಲಾವಣೆ ಮಾಡುವುದು ಸರಿಯಾದ ತಂತ್ರವಾಗಿದೆ. 21–24 ವರ್ಷದ ಅವಧಿಯಲ್ಲಿ ಗಂಭೀರವಾಗಿ ಅನ್ವೇಷಿಸಿ. ನೀವು ಏನು ಎನ್ನುವುದನ್ನು ಕಂಡುಕೊಳ್ಳಿ. ಅಗತ್ಯವಿದ್ದರೆ ಕೆಲಸ ಬದಲಿಸಿ. 25 ವರ್ಷಗಳ ನಂತರ, ನಿಮಗೆ ತಕ್ಕ ಕಂಪನಿಯನ್ನು ಹುಡುಕಿ, 4 ವರ್ಷಗಳ ಕಾಲ ಬದ್ಧರಾಗಿರಿ’ ಎಂದಿದ್ದಾರೆ.

‘ಒಂದು ಸಂಸ್ಥೆಯನ್ನು ಕಟ್ಟಬೇಕು ಅಥವಾ ಸಿಇಒ ಆಗಬೇಕು ಎಂದುಕೊಂಡರೆ ಎಂತಹ ಒತ್ತಡವನ್ನೂ ತಡೆದುಕೊಳ್ಳಬಲ್ಲರಿ ಎನ್ನುವುದನ್ನು ಅರಿತುಕೊಳ್ಳಿ. ಒಂದು ಕೆಲಸವನ್ನು ಅರ್ಥಮಾಡಿಕೊಳ್ಳಲು 1 ವರ್ಷ ತೆಗೆದುಕೊಳ್ಳುತ್ತದೆ ಆದರೆ ಒಂದು ಉದ್ಯಮವನ್ನು ಅರ್ಥಮಾಡಿಕೊಳ್ಳಲು 3-5 ವರ್ಷ ತೆಗೆದುಕೊಳ್ಳುತ್ತದೆ. ಆಗ ನೀವು ಗೆಲ್ಲುತ್ತೀರಿ’ ಎಂದು ಬರೆದುಕೊಂಡಿದ್ದಾರೆ.

ಅನುಪಮ್ ಮಿತ್ತಲ್ ಹಂಚಿಕೊಂಡ ಪೋಸ್ಟ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.