ADVERTISEMENT

ಸುದ್ದಿ ಪಡೆಯುವ ಗೂಗಲ್‌, ಫೇಸಬುಕ್‌ ದುಡ್ಡು ಕೊಡಬೇಕು: ಆಸ್ಟ್ರೇಲಿಯಾ

ವಿಶ್ವದ ಮೊದಲ ಕಾನೂನು ರೂಪಿಸುವತ್ತ ಆಸ್ಟ್ರೇಲಿಯಾ ಹೆಜ್ಜೆ

ಏಜೆನ್ಸೀಸ್
Published 15 ಫೆಬ್ರುವರಿ 2021, 7:36 IST
Last Updated 15 ಫೆಬ್ರುವರಿ 2021, 7:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕ್ಯಾನ್‌ಬೆರಾ: ‘ಸುದ್ದಿ, ಲೇಖನ ಸೇರಿದಂತೆ ಇತರೆ ವಿಷಯಗಳನ್ನು ಬಳಸಿಕೊಳ್ಳಲು ಗೂಗಲ್ ಮತ್ತು ಫೇಸ್‌ಬುಕ್‌ ಇನ್ನು ಮುಂದೆ ಮಾಧ್ಯಮಗಳಿಗೆ ಹಣ ಪಾವತಿಸಬೇಕು ಎಂಬ ವಿಶ್ವದ ಮೊದಲ ಕಾನೂನು ಜಾರಿಗೆ ತರಲು ಆಸ್ಟ್ರೇಲಿಯಾ ಸಜ್ಜಾಗಿದೆ.

‘ಈ ಕುರಿತ ಮಾತುಕತೆ ಅಂತಿಮ ಹಂತದಲ್ಲಿದೆ.ಈ ಒಪ್ಪಂದದ ಬಗ್ಗೆವಾರಾಂತ್ಯದಲ್ಲಿ ಫೇಸ್‌ಬುಕ್‌ ಮುಖ್ಯಸ್ಥ ಮಾರ್ಕ್ ಜುಕರ್‌ಬರ್ಗ್ ಮತ್ತು ಗೂಗಲ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸುಂದರ್‌ ಪಿಚೈ ಅವರ ಜತೆಗೆ ಚರ್ಚೆ ನಡೆಸಿದ್ದೇವೆ. ಅಲ್ಲದೆ ಈ ಬಗ್ಗೆ ಆಸ್ಟ್ರೇಲಿಯಾ ಸುದ್ದಿ ಮಾಧ್ಯಮಗಳ ಕಾರ್ಯನಿರ್ವಹಣಾಧಿಕಾರಿಗಳೊಂದಿಗೂ ಮಾತುಕತೆ ನಡೆಸಲಾಗಿದೆ’ ಎಂದು ಸಚಿವ ಜೋಶ್ ಫ್ರೈಡೆನ್‌ಬರ್ಗ್ ಅವರು ಮಾಹಿತಿ ನೀಡಿದರು.

‘ಈ ಒಪ್ಪಂದದ ಬಗ್ಗೆ ಕಳೆದ 48 ರಿಂದ 72 ಗಂಟೆಗಳಲ್ಲಿ ಪ್ರಗತಿ ಸಾಧಿಸಿದ್ದೇವೆ. ಗೂಗಲ್‌ ಮತ್ತು ಫೇಸ್‌ಬುಕ್‌ನೊಂದಿಗೆ ಮಹತ್ವದ ವಾಣಿಜ್ಯ ಒಪ್ಪಂದ ನಡೆಯಲಿದೆ ಎಂಬ ಭರವಸೆಯಿದೆ. ಈ ಒಪ್ಪಂದವು ದೇಶಿಯ ಮಾಧ್ಯಮಗಳಿಗೆ ಸಹಾಯವನ್ನು ಮಾಡಲಿದೆ. ಅಲ್ಲದೆ ಇದರಿಂದಾಗಿ ನೈಜ ವಿಷಯಗಳನ್ನು ಬಿತ್ತರಿಸುವ ಮಾಧ್ಯಮಗಳಿಗೆ ಹಣಕಾಸಿನ ನೆರವು ಕೂಡ ಸಿಗಲಿದೆ’ ಎಂದು ಫ್ರೈಡೆನ್‌ಬರ್ಗ್ ಹೇಳಿದರು.

ADVERTISEMENT

‘ಬೇರೆ ಯಾವುದೇ ರಾಷ್ಟ್ರ ಈ ರೀತಿಯ ಕ್ರಮಗಳನ್ನು ಕೈಗೊಂಡಿಲ್ಲ. ಇದು ತುಂಬಾ ಕಠಿಣ ಪ್ರಕ್ರಿಯೆಯಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು. ಈ ಒಪ್ಪಂದದ ಬಗ್ಗೆ ಗೂಗಲ್‌ ಅಥವಾ ಫೇಸ್‌ಬುಕ್‌ ಸಂಸ್ಥೆಗಳು ಪ್ರತಿಕ್ರಿಯೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.