ADVERTISEMENT

ಕೊರೊನಾವೈರಸ್‌ ಸಂಹಾರ ಮಾಡುತ್ತಿರುವ ವೈದ್ಯರ ರೂಪದಲ್ಲಿ ದುರ್ಗೆ; ತರೂರ್ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 2:50 IST
Last Updated 20 ಅಕ್ಟೋಬರ್ 2020, 2:50 IST
ವೈರಲ್ ಚಿತ್ರ (ಕೃಪೆ: ಶಶಿ ತರೂರ್ ಟ್ವೀಟ್)
ವೈರಲ್ ಚಿತ್ರ (ಕೃಪೆ: ಶಶಿ ತರೂರ್ ಟ್ವೀಟ್)   

ನವದೆಹಲಿ: ಕೊರೊನಾವೈರಸ್‌ನ್ನು ಸಂಹಾರ ಮಾಡುತ್ತಿರುವ ವೈದ್ಯರ ರೂಪದಲ್ಲಿರುವ ದುರ್ಗಾ ಮೂರ್ತಿಯ ಚಿತ್ರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವೈದ್ಯರ ಕೋಟ್ ಧರಿಸಿರುವ ದುರ್ಗೆಯ ಕೈಯಲ್ಲಿ ತ್ರಿಶೂಲದ ಬದಲು ಸಿರಿಂಜ್ ಇದೆ, ಆಕೆ ಸಂಹಾರ ಮಾಡುತ್ತಿರುವ ಅಸುರ ಕೊರೊನಾ ವೈರಸ್.ವಿಭಿನ್ನ ರೀತಿಯಲ್ಲಿರುವ ದೇವಿಮೂರ್ತಿಯ ಫೋಟೊವನ್ನು ಸಂಸದ ಶಶಿ ತರೂರ್ ಟ್ವೀಟಿಸಿ, ಕಲಾವೈಖರಿಯನ್ನು ಶ್ಲಾಘಿಸಿದ್ದಾರೆ.

ದೇವಿ ವೈರಸ್‌ನ್ನು ಸಂಹಾರ ಮಾಡುತ್ತಿರುವ ಕಲಾತ್ಮಕತೆಯಿಂದ ಕೂಡಿದ ದುರ್ಗೆ ಕೊಲ್ಕತ್ತಾದ್ದು, ಅನಾಮಿಕ ಡಿಸೈನರ್ ಮತ್ತು ಶಿಲ್ಪಿಗೆ ನಮಸ್ಕಾರಗಳು ಎಂದು ತರೂರ್ ಸೋಮವಾರ ಟ್ವೀಟಿಸಿದ್ದಾರೆ.

ADVERTISEMENT

ಇದಕ್ಕೆ ಪ್ರತಿಕ್ರಿಯೆಯಾಗಿ ವೈದ್ಯರೇ ದೇವಿಯ ಭಂಗಿಯಲ್ಲಿ ನಿಂತಿರುವ ಚಿತ್ರಗಳನ್ನು, ಕೊರೊನಾ ಸೇನಾನಿಗಳನ್ನು ಬಿಂಬಿಸುವ ಮೂರ್ತಿಗಳನ್ನುನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.