ನವದೆಹಲಿ: ಜನಪ್ರಿಯ ಸಂದೇಶ ವಾಹಕ ವ್ಯಾಟ್ಸ್‌ಆ್ಯಪ್‌ನಲ್ಲಿ ಕೆಲವೊಂದು ಲೋಪ ಪತ್ತೆಯಾಗಿದ್ದು, ಬಳಕೆದಾರರು ಈ ಕುರಿತು ಜಾಗೃತರಾಗಿರಬೇಕು ಎಂದು ಸೈಬರ್ ಭದ್ರತಾ ಸಂಸ್ಥೆ ಸೆರ್ಟ್–ಇನ್ ಎಚ್ಚರಿಸಿದೆ.
ಈ ಬಗ್ಗೆ ಭಾರತದ ಕಂಪ್ಯೂಟರ್ ತುರ್ತು ಸ್ಪಂದನಾ ತಂಡ ಕಟ್ಟೆಚ್ಚರ ನೀಡಿದ್ದು, ಅಂಡ್ರಾಯ್ಡ್ ಆವೃತ್ತಿ ವಿ2.21.4.18 ಅಥವಾ ಅದಕ್ಕೂ ಮೊದಲಿನ ಹಾಗೂ ಐಇಎಸ್‌ನ ವಿ2.21.21.32 ಅಥವಾ ಅದಕ್ಕೂ ಮೊದಲಿನ ವ್ಯಾಟ್ಸ್‌ಆ್ಯಪ್, ವ್ಯಾಟ್ಸ್‌ಆ್ಯಪ್ ಬ್ಯುಸಿನೆಸ್ ಆ್ಯಪ್‌ಗಳಲ್ಲಿ ಆವೃತ್ತಿಗಳಲ್ಲಿ ಲೋಪ ಕಂಡುಬಂದಿದೆ ಎಂದಿದೆ.
ದೇಶದಲ್ಲಿ ಸೈಬರ್ ದಾಳಿಯನ್ನು ಪರಿಣಾಮಕಾರಿ ಎದುರಿಸಿ ರಕ್ಷಣೆ ಒದಗಿಸಲು ಸೆರ್ಟ್–ಇನ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ನಿರ್ದಿಷ್ಟ ಸಿಸ್ಟಮ್‌ಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸುವಂತೆ ಕೋಡ್ ಅನ್ನು ದಾಳಿಕೋರರು ಬಹುಮಾದರಿಯ ವೈರಸ್ ಮೂಲಕ ಪ್ರಯೋಗಿಸುತ್ತಿದ್ದಾರೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.