ADVERTISEMENT

ಹಲವು ವರ್ಷಗಳಿಂದ ಸಕ್ರಿಯವಾಗಿರದ ಖಾತೆಗಳನ್ನು ‘ಡಿಲೀಟ್‘ ಮಾಡಲಿರುವ ಟ್ವಿಟರ್!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಮೇ 2023, 5:41 IST
Last Updated 9 ಮೇ 2023, 5:41 IST
ಟ್ವಿಟರ್‌
ಟ್ವಿಟರ್‌   

ಹಲವು ವರ್ಷಗಳಿಂದ ಸಕ್ರಿಯವಾಗಿರದ ಟ್ವಿಟರ್‌ ಖಾತೆಗಳನ್ನು ಟ್ವೀಟರ್‌ ಪೇಜ್‌ನಿಂದ ‘ಡಿಲೀಟ್‌‘ ಮಾಡಲು ಟ್ವಿಟರ್‌ ನಿರ್ಧರಿಸಿದ್ದು, ಈ ಬಗ್ಗೆ ಟ್ವಿಟರ್ ಮಾಲೀಕ ಎಲಾನ್‌ ಮಸ್ಕ್‌ ಮಾಹಿತಿ ನೀಡಿದ್ದಾರೆ.

‘ಹಲವಾರು ವರ್ಷಗಳಿಂದ ಯಾವುದೇ ಚಟುವಟಿಕೆಯಿಲ್ಲದೆ ನಿಷ್ಕ್ರಿಯಗೊಂಡಿರುವ ಖಾತೆಗಳನ್ನು ಟ್ವಿಟರ್‌ ಪೇಜ್‌ನಿಂದ ತೆಗೆದು ಹಾಕಲು ನಿರ್ಧರಿಸಿದ್ದೇವೆ. ಇದರಿಂದ ನಿಮ್ಮ ಫಾಲೋವರ್‌ ಸಂಖ್ಯೆ ಕಡಿಮೆಯಾಗಬಹುದು‘ ಎಂದು ಎಲಾನ್‌ ಮಸ್ಕ್‌ ಟ್ವೀಟ್‌ ಮಾಡಿದ್ದಾರೆ.

ಖಾತೆ ಡಿಲೀಟ್ ಆಗದಂತೆ ತಡೆಯಲು ಬಳಕೆದಾರರು ಪ್ರತಿ 30 ದಿನಗಳಿಗೊಮ್ಮೆ ತಮ್ಮ ಖಾತೆಗೆ ಲಾಗ್‌ ಇನ್‌ ಆಗಬೇಕಾಗಿದೆ ಎಂದು ತಿಳಿಸಿದೆ.

ADVERTISEMENT

ಟೆಸ್ಲಾ ಸಿಇಓ ಎಲಾನ್‌ ಮಸ್ಕ್‌ ಟ್ವೀಟರ್‌ ಮಾಲೀಕರಾದ ಮೇಲೆ ಹಲವು ನಿಯಮಗಳನ್ನು ಜಾರಿಗೆ ತಂದಿದ್ದರು. ಇತ್ತೀಚೆಗೆ ಸೆಲೆಬ್ರಿಟಿಗಳು, ರಾಜಕಾರಣಿಗಳು ಸೇರಿದಂತೆ ಖ್ಯಾತ ನಾಮರ ಅಧಿಕೃತ ಟ್ವಿಟರ್‌ ಖಾತೆಯಿಂದ ಬ್ಲೂಟಿಕ್ ತೆಗೆದು ಹಾಕುವುದರ ಮೂಲಕ ತಿಂಗಳಿಗೆ 8 ಡಾಲರ್ ಪಾವತಿಸಿದರೆ ಮಾತ್ರ ಬ್ಲೂಟಿಕ್‌ ಕೊಡಲಾಗುತ್ತದೆ ಎಂದು ತಿಳಿಸಿದ್ದರು. ಈ ಹೊಸ ಪ್ರಯತ್ನ ವಿಫಲವಾದ ಬೆನ್ನಲ್ಲೇ ಮತ್ತೆ ಬ್ಲೂಟಿಕ್‌ ಮರಳಿಸಿದ್ದರು.

ಪ್ರಕಾಶನ ಸಂಸ್ಥೆಗಳು ತಮ್ಮ ಓದುಗರಿಂದ ಪ್ರತಿ ಲೇಖನಕ್ಕೆ ಶುಲ್ಕ ಪಡೆಯಲು ಟ್ವೀಟರ್ ಅವಕಾಶ ಮಾಡಿಕೊಟ್ಟಿದೆ ಎಂದು ಎಲಾನ್ ಮಸ್ಕ್‌ ಟ್ವೀಟ್‌ ಮಾಡಿ ತಿಳಿಸಿದ್ದರು. ಆದರೆ, ಈ ಯೋಜನೆಯಿಂದ ಸಿಗುವ ಮೊತ್ತದಲ್ಲಿ ಟ್ವಿಟರ್‌ ಪಾಲು ಎಷ್ಟು ಎಂಬ ಪ್ರಶ್ನೆಗೆ ಎಲಾನ್‌ ಸ್ಪಷ್ಟನೆ ನೀಡಿರಲಿಲ್ಲ.

ಕಳೆದ ವಾರ ದೇಶದ ಪ್ರಮುಖ ನ್ಯೂಸ್ ಏಜೆನ್ಸಿಗಳ ಅಧಿಕೃತ ಟ್ವಿಟರ್ ಖಾತೆಗಳನ್ನು ಲಾಕ್‌ ಮಾಡಿಯೂ ಸುದ್ದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.