ADVERTISEMENT

ಸಿಇಒ ಆಗಿ ಟ್ವಿಟರ್ ಮುನ್ನಡೆಸಲಿದ್ದಾರೆ ಎಲಾನ್ ಮಸ್ಕ್

ರಾಯಿಟರ್ಸ್
Published 1 ನವೆಂಬರ್ 2022, 3:06 IST
Last Updated 1 ನವೆಂಬರ್ 2022, 3:06 IST
ಎಲಾನ್ ಮಸ್ಕ್‌
ಎಲಾನ್ ಮಸ್ಕ್‌   

ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ನ ಸಿಇಒ ಆಗಿ ಕಾರ್ಯನಿರ್ವಹಿಸುವುದಾಗಿ ಉದ್ಯಮಿ ಎಲಾನ್ ಮಸ್ಕ್‌ ತಿಳಿಸಿದ್ದಾರೆ.

ಟ್ವಿಟರ್‌ ಕಂಪನಿಯನ್ನು ಮಸ್ಕ್‌ ಅವರುಸುಮಾರು ₹ 3.62 ಲಕ್ಷ ಕೋಟಿಗೆ ಖರೀದಿಸಿದ್ದಾರೆ. ಕಳೆದವಾರಖರೀದಿ ಪ್ರಕ್ರಿಯೆಪೂರ್ಣಗೊಂಡಿದೆ.

ಮಸ್ಕ್‌ ಅವರು ತಮ್ಮ ಟ್ವಿಟರ್ ಖಾತೆಯ ಬಯೋದಲ್ಲಿ 'ಚೀಫ್‌ ಟ್ವಿಟರ್‌' ಎಂದು ಬದಲಿಸಿಕೊಂಡಿದ್ದಾರೆ. ಆದರೆ, ಅವರು ಎಷ್ಟು ದಿನದವರೆಗೆ ಸಿಇಒ ಆಗಿ ಮುಂದುವರಿಯಲಿದ್ದಾರೆ, ಬೇರೆ ಯಾರನ್ನಾದರೂ ನೇಮಿಸಲಿದ್ದಾರೆಯೇ ಎಂಬ ಬಗ್ಗೆ ಟ್ವಿಟರ್‌ ಯಾವುದೇ ಮಾಹಿತಿ ನೀಡಿಲ್ಲ.

ADVERTISEMENT

ಮಸ್ಕ್‌ ಅವರು ಸದ್ಯ ಎಲೆಕ್ಟ್ರಿಕ್‌ ಕಾರು ತಯಾರಿಕಾ ಕಂಪನಿ'ಟೆಸ್ಲಾ', ಬಾಹ್ಯಾಕಾಶ ತಂತ್ರಜ್ಞಾನಕ್ಕೆ ಸಂಬಂಧಿಸಿದ'ಸ್ಪೇಸ್‌ಎಕ್ಸ್‌', ಕೃತಕ ಬುದ್ಧಿಮತ್ತೆ ಸಾಧನಗಳನ್ನು ಅಭಿವೃದ್ಧಿಪಡಿಸುವ 'ನ್ಯೂರಲಿಂಕ್‌', ಸುರಂಗ ನಿರ್ಮಾಣಕ್ಕೆ ಸಂಬಂಧಿಸಿದ'ದಿ ಬೋರಿಂಗ್‌ ಕಂಪನಿ'ಯನ್ನು ಮುನ್ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.