ADVERTISEMENT

ಸರ್ವರ್ ಸಮಸ್ಯೆಗೆ ತುತ್ತಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಏಪ್ರಿಲ್ 2021, 1:26 IST
Last Updated 9 ಏಪ್ರಿಲ್ 2021, 1:26 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಸಾಮಾಜಿಕ ಮಾಧ್ಯಮ ತಾಣಗಳಾದ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಗುರುವಾರ ತಡರಾತ್ರಿ ಜಾಗತಿಕವಾಗಿ ಬಳಕೆದಾರರಿಗೆ ಲಭ್ಯವಾಗದೆ ಸಮಸ್ಯೆ ಎದುರಾಯಿತು.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಆ್ಯಪ್‌ಗಳ ಸೇವೆ ಲಭ್ಯವಾಗದೇ ಬಳಕೆದಾರರು ಪರದಾಡಿದರು. ಕೆಲಸಮಯದ ನಂತರ ಮತ್ತೆ ಉಭಯ ಆ್ಯಪ್‌ಗಳ ಸೇವೆ ಜಾಗತಿಕವಾಗಿ ಲಭ್ಯವಾಗಿದೆ.

ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ ಎಂದು ಹಲವು ಬಳಕೆದಾರರು ದೂರಿದ್ದಾರೆ. ಗುರುವಾರ ತಡರಾತ್ರಿ ಕೆಲಸಮಯದವರೆಗೆ ಜಾಗತಿಕವಾಗಿ ಕೆಲವು ಬಳಕೆದಾರರಿಗೆ ಆ್ಯಪ್ ಸೇವೆ ಲಭ್ಯವಾಗಿಲ್ಲ ಎಂದು ಡೌನ್‌ಡಿಟೆಕ್ಟರ್.ಕಾಂ ವರದಿ ಮಾಡಿದೆ.

ADVERTISEMENT

ಸುಮಾರು 3,000ಕ್ಕೂ ಅಧಿಕ ಇನ್‌ಸ್ಟಾಗ್ರಾಂ ಬಳಕೆದಾರರು ಮತ್ತು 1,000ಕ್ಕೂ ಅಧಿಕ ಫೇಸ್‌ಬುಕ್ ಬಳಕೆದಾರರು ಸಮಸ್ಯೆ ಕುರಿತು ಡೌನ್‌ಡಿಟೆಕ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.