ADVERTISEMENT

ಮೋದಿಯವರ ಮೇಕಪ್ ಆರ್ಟಿಸ್ಟ್‌ಗೆ ತಿಂಗಳಿಗೆ ₹15 ಲಕ್ಷ?: ಇದು ಸುಳ್ಳು ಸುದ್ದಿ

ವೈರಲ್ ಸುದ್ದಿ ಹಿಂದಿನ ನಿಜ ಸಂಗತಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 4:24 IST
Last Updated 25 ಅಕ್ಟೋಬರ್ 2018, 4:24 IST
   

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ತಮ್ಮ ಮೇಕಪ್ ಕಲಾವಿದರಿಗೆ ತಿಂಗಳಿಗೆ ₹15 ಲಕ್ಷ ಸಂಬಳ ನೀಡುತ್ತಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.


ಆದಿತ್ಯ ಚತುರ್ವೇದಿ ಎಂಬ ಫೇಸ್‍ಬುಕ್ ಬಳಕೆದಾರರೊಬ್ಬರು ಈ ವಿಷಯವನ್ನು ಪೋಸ್ಟ್ಮಾಡಿದ್ದು, ಆ ಪೋಸ್ಟ್ 16,300ಕ್ಕಿಂತಲೂ ಹೆಚ್ಚು ಬಾರಿ ಶೇರ್ ಆಗಿದೆ.

ನಿಜ ಸಂಗತಿ ಏನು?
ಪೋಸ್ಟ್ ನಲ್ಲಿರುವ ನರೇಂದ್ರ ಮೋದಿ ಅವರ ಫೋಟೊ ಮೇಡಂ ಟುಸ್ಸಾಡ್ ಮ್ಯೂಸಿಯಂನಲ್ಲಿ ಮೇಣದ ಪ್ರತಿಮೆ ನಿರ್ಮಾಣಕ್ಕಾಗಿ ದೇಹದ ಅಳತೆ ತೆಗೆಯುತ್ತಿರುವ ಫೋಟೊ ಆಗಿದೆ.

ADVERTISEMENT

ಫೋಟೊದಲ್ಲಿ ಕಾಣುತ್ತಿರುವ ಮಹಿಳೆ ಮೋದಿಯವರಿಗೆ ಮೇಕಪ್ ಮಾಡುತ್ತಿರುವುದಲ್ಲ. ಮೋದಿಯವರ ಕಣ್ಣಿನ ಕಲರ್ ನೋಡಿ ಮುಖಭಾವಗಳನ್ನು ಗುರುತಿಸಿಕೊಳ್ಳುತ್ತಿರುವ ಚಿತ್ರವಾಗಿದೆ ಅದು.ಮೇಣದ ಪ್ರತಿಮೆ ತಯಾರಿಸಲು ದೇಹರಚನೆಯ ಬಗ್ಗೆ ತಿಳಿದುಕೊಳ್ಳುವ ಪ್ರಕ್ರಿಯೆ ಇದಾಗಿದೆ.

ಮೇಕಪ್ ಆರ್ಟಿಸ್ಟ್‌ಗೆ ತಿಂಗಳಿಗೆ ₹15 ಲಕ್ಷ?

ಪ್ರಧಾನಿ ಮೋದಿ ಮೇಕಪ್ ಕಲಾವಿದರಿಗೆ ತಿಂಗಳಿಗೆ ₹15 ಲಕ್ಷ ಸಂಬಳ ನೀಡುತ್ತಾರೆ ಎಂಬ ವಾದಕ್ಕೆ ಯಾವುದೇ ಮೂಲಗಳು ಇಲ್ಲ. ಪ್ರಧಾನಿಯವರ ವೆಬ್‍ಸೈಟ್ ನಲ್ಲಿಯಾಗಲೀ, ಆರ್ ಟಿ ಐ ಮಾಹಿತಿ ಮೂಲಕವಾಗಲೀ ಈ ಒಂದು ವಾದವನ್ನು ಸಮರ್ಥಿಸಿಕೊಳ್ಳುವ ಯಾವುದೇ ಮೂಲ ಇಲ್ಲಿ ಇಲ್ಲ.

ಈ ಸ್ಟೇಟಸ್‍ ಬಗ್ಗೆಫ್ಯಾಕ್ಟ್ ಚೆಕ್ ಮಾಡಿದರೆ, ಅಲ್ಲಿ ಬರೆದಿರುವ ಅದೇ ಸ್ಟೇಟಸ್‍ನ್ನೇ ಹಲವಾರು ಮಂದಿ ಕಾಪಿ ಪೇಸ್ಟ್ ಮಾಡಿದ್ದಾರೆಯೇ ಹೊರತು ಅದಕ್ಕಿಂತ ಹೆಚ್ಚಿನ ಮಾಹಿತಿಗಳು ಇಲ್ಲ.

ಹಾಗಾಗಿ ಪ್ರಧಾನಿ ಮೋದಿಯವರು ಮೇಕಪ್ ಕಲಾವಿದರಿಗೆ ತಿಂಗಳಿಗೆ 15 ಲಕ್ಷ ಸಂಬಳ ನೀಡುತ್ತಾರೆ ಎಂಬ ವಾದವೂ ಸುಳ್ಳು ಮತ್ತು ಇಲ್ಲಿ ಬಳಸಿರುವ ಫೋಟೊ ಕೂಡಾ ವಿಷಯಕ್ಕೆ ಸಂಬಂಧಿಸಿದ್ದು ಅಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ.ಬೂಮ್ ಲೈವ್ ಕೂಡಾಪ್ರಧಾನಿ ಮೇಕಪ್ ಸುದ್ದಿ ಸುಳ್ಳು ಎಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.