ADVERTISEMENT

ವೆರಿಫೈಡ್ ಸಂಸ್ಥೆಗಳಿಗೆ ಉದ್ಯೋಗಾವಕಾಶದ ವೈಶಿಷ್ಟ್ಯ ಪರಿಚಯಿಸಿದ 'ಎಕ್ಸ್'

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2023, 4:29 IST
Last Updated 27 ಆಗಸ್ಟ್ 2023, 4:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಟೆಸ್ಲಾ ಖ್ಯಾತಿಯ ಉದ್ಯಮಿ ಎಲಾನ್ ಮಸ್ಕ್ ಇತ್ತೀಚೆಗಷ್ಟೇ ಮೈಕ್ರೋಬ್ಲಾಗಿಂಗ್ ಜಾಲತಾಣ, ಎಕ್ಸ್‌ನಲ್ಲಿ (ಟ್ವಿಟರ್) ಉದ್ಯೋಗಾವಕಾಶದ ವೈಶಿಷ್ಟ್ಯವನ್ನು ಪರಿಚಯಿಸುವುದಾಗಿ ಘೋಷಿಸಿದ್ದರು.

ಈಗ ವೆರಿಫೈಡ್ ಸಂಸ್ಥೆಗಳಿಗೆ ಎಕ್ಸ್‌ನಲ್ಲಿ ಉದ್ಯೋಗಾವಕಾಶದ (Job Listing) ಕುರಿತು ಪೋಸ್ಟ್ ಮಾಡುವ ಸೇವೆಯನ್ನು ಪ್ರಾರಂಭಿಸಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ವಿವರಣೆ ನೀಡಿದೆ. ಜಾಬ್ ಲಿಸ್ಟಿಂಗ್ ಫೀಚರ್ ಸದ್ಯ ಬೀಟಾ ವರ್ಷನ್‌ನಲ್ಲಿದೆ.

ADVERTISEMENT

ಕೆಲವು ಸಮಯಗಳ ಹಿಂದೆಯಷ್ಟೇ ಎಲಾನ್ ಮಸ್ಕ್ ಅವರು ಟ್ವಿಟರ್ ಹೆಸರನ್ನು 'ಎಕ್ಸ್' ಎಂದು ಮರುನಾಮಕರಣ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.