ADVERTISEMENT

ಫೋನ್‌ ಪೇ ಆ್ಯಪ್‌ನಲ್ಲಿ 'ಕನ್ನಡ' ಮಾಯ  

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2019, 13:02 IST
Last Updated 15 ಅಕ್ಟೋಬರ್ 2019, 13:02 IST
   

ಬೆಂಗಳೂರು: ಮೊಬೈಲ್ ವಾಲೆಟ್ ಆ್ಯಪ್ಫೋನ್ ಪೇಯಲ್ಲಿಕನ್ನಡ ಭಾಷೆ ಮಾಯವಾಗಿದೆ. ಈ ಹಿಂದೆ ಭಾಷೆಗಳನ್ನು ಆಯ್ಕೆ ಮಾಡುವ ಪಟ್ಟಿಯಲ್ಲಿ ಕನ್ನಡ ಇತ್ತು. ಆದರೆ ಅಪ್‌ಡೇಟ್ ಆಗಿರುವ ಆ್ಯಪ್‌ನಲ್ಲಿ ಕನ್ನಡವನ್ನುತೆಗೆದುಹಾಕಲಾಗಿದೆ.

ಆ್ಯಪ್‌ನಿಂದ ಕನ್ನಡವನ್ನು ತೆಗೆದು ಹಾಕಿದ್ದು ಯಾಕೆ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ. ಅದೇ ವೇಳೆ ಕನ್ನಡ ಭಾಷೆ ಆಯ್ಕೆ ಇಲ್ಲದ ಫೋನ್ ಪೇ ಆ್ಯಪ್ ಅನ್‌ಇನ್‌ಸ್ಟಾಲ್ ಮಾಡುವ ಮೂಲಕವೂ ಕೆಲವು ಗ್ರಾಹಕರು ಪ್ರತಿಭಟಿಸಿದ್ದಾರೆ.

ಕೆಲವು ಭಾಷೆಗಳನ್ನು ಆ್ಯಪ್ ಸಪೋರ್ಟ್ ಮಾಡುತ್ತಿಲ್ಲಎಂದ ಫೋನ್ ಪೇ

ADVERTISEMENT

ಫೋನ್ ಪೇ ಆ್ಯಪ್‌ನಲ್ಲಿ ಕನ್ನಡ ತೆಗೆದುಹಾಕಿರುವುದರ ಬಗ್ಗೆ ಟ್ವೀಟ್‌ ಪ್ರತಿಭಟನೆ ಶುರುವಾಗುತ್ತಿದ್ದಂತೆ ಉತ್ತರಿಸಿದ ಫೋನ್ ಪೇನಮ್ಮ ಆ್ಯಪ್ ಕೆಲವೊಂದು ಭಾಷೆಗಳನ್ನು ಸಪೋರ್ಟ್ ಮಾಡುತ್ತಿಲ್ಲ. ಇದರಿಂದಾಗಿ ನಿಮಗೆ ತೊಂದರೆಯುಂಟಾಗಿದೆ ಎಂದು ನಮಗರ್ಥವಾಗುತ್ತಿದೆ. ಇಂಗ್ಲಿಷ್ ಭಾಷೆ ಆಯ್ಕೆ ಮಾಡುವ ಮೂಲಕ ನೀವು ಆ್ಯಪ್‌ನ್ನು ಬಳಕೆ ಮುಂದುವರಿಸಬೇಕೆಂದುನಾವು ವಿನಂತಿ ಮಾಡುತ್ತಿದ್ದೇವೆ. ಯಾವುದೇ ಸಹಾಯ ಬೇಕಿದ್ದರೆ ನಮ್ಮನ್ನು ಸಂಪರ್ಕಿಸಿ ಎಂದು ಟ್ವೀಟಿಸಿದೆ.

ಫೇಸ್‌ಬುಕ್‌ನಲ್ಲಿಯೂ ಫೋನ್‌ ಪೇ ವಿರುದ್ಧ ದನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.