ADVERTISEMENT

ಮೈಕ್ರೊ ಬ್ಲಾಗಿಂಗ್ ‘ಕೂ’ನಲ್ಲಿ ಸ್ವಯಂ ದೃಢೀಕರಣ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 11:30 IST
Last Updated 6 ಏಪ್ರಿಲ್ 2022, 11:30 IST
ಕೊ ಆ್ಯಪ್‌
ಕೊ ಆ್ಯಪ್‌   

ಬೆಂಗಳೂರು: ಮೈಕ್ರೊ ಬ್ಲಾಗಿಂಗ್ ವೇದಿಕೆ ಆಗಿರುವ ‘ಕೊ’, ಪ್ರೊಫೈಲ್‌ ಅನ್ನು ಸ್ವಯಂ ದೃಢೀಕರಿಸುವ ವೈಶಿಷ್ಟ್ಯಕ್ಕೆ ಚಾಲನೆ ನೀಡಿದೆ.

ಬಳಕೆದಾರರು ಸರ್ಕಾರ ಅನುಮೋದಿಸಿರುವ ಯಾವುದೇ ಗುರುತಿನ ಚೀಟಿಯ ಮೂಲಕ ಸ್ವಯಂ ದೃಢೀಕರಣ ಮಾಡಬಹುದು. ಗುರುತಿನ ಸಂಖ್ಯೆ ನೀಡಿದ ಬಳಿಕ ಬರುವ ‘ಒಟಿಪಿ’ಯನ್ನು ನಮೂದಿಸಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇದನ್ನು ಖಾತರಿಪಡಿಸಲು ಪ್ರೊಫೈಲ್‌ನಲ್ಲಿ ಹೆಸರಿನ ಮುಂದೆ ಹಸಿರು ಟಿಕ್‌ ಮಾರ್ಕ್‌ ಕಾಣಿಸುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ನಂಬಿಕೆ ಮತ್ತು ಸುರಕ್ಷತೆಯನ್ನು ಉತ್ತೇಜಿಸುವಲ್ಲಿ ‘ಕೊ’ ಮುಂಚೂಣಿಯಲ್ಲಿದೆ. ಸ್ವಯಂ ದೃಢೀಕರಣ ವ್ಯವಸ್ಥೆಯನ್ನು ಪ್ರಾರಂಭಿಸಿದ ವಿಶ್ವದ ಮೊದಲ ಸಾಮಾಜಿಕ ಮಾಧ್ಯಮ ವೇದಿಕೆ ಇದಾಗಿದೆ. ವೇದಿಕೆಯಲ್ಲಿ ಜವಾಬ್ದಾರಿಯುತ ನಡವಳಿಕೆಯನ್ನು ಉತ್ತೇಜಿಸುವಲ್ಲಿ ಇದು ಮಹತ್ವದ ಹೆಜ್ಜೆ ಎಂದು ‘ಕೊ’ ಸಹ ಸ್ಥಾಪಕ ಅಪ್ರಮೇಯ ರಾಧಾಕೃಷ್ಣ ತಿಳಿಸಿದರು.

ADVERTISEMENT

ದೃಢೀಕರಣ ಪ್ರಕ್ರಿಯೆಯನ್ನು ಸರ್ಕಾರದಿಂದ ಒಪ್ಪಿಗೆ ಪಡೆದಿರುವ ಥರ್ಡ್‌ ಪಾರ್ಟಿ ಸೇವೆಗಳನ್ನು ನೀಡುವವರು ನಿರ್ವಹಿಸುತ್ತಾರೆ. ಬಳಕೆದಾರರ ಯಾವುದೇ ಮಾಹಿತಿ ಸಂಗ್ರಹಿಸುವುದಿಲ್ಲ ಎಂದರು.

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್‌ ಮಾಧ್ಯಮ ನೀತಿ ಸಂಹಿತೆ) ನಿಯಮ 2021ರ ಸೆಕ್ಷನ್ 4(7)ಕ್ಕೆ ಅನುಗುಣವಾಗಿ ಈ ವೈಶಿಷ್ಟ್ಯವನ್ನು ಚಾಲ್ತಿಗೆ ತರಲಾಗಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.