ADVERTISEMENT

ಹೆಬ್ಬಾವಿನ ಜೊತೆ ಆಟವಾಡಿದ ಬಾಲಕಿ...

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2021, 8:51 IST
Last Updated 13 ಡಿಸೆಂಬರ್ 2021, 8:51 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಮುದ್ದಾದ ಬಾಲಕಿ ಮನೆಯ ಮುಂದೆ ಹೆಬ್ಬಾವಿನೊಂದಿಗೆ ಆಟವಾಡಿ ಅದರ ಮೇಲೆ ಮಲಗಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ಘಟನೆ ಎಲ್ಲಿ ನಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಈ ವಿಡಿಯೊವನ್ನು ’ಸ್ನೇಕ್‌ ವರ್ಲ್ಡ್‌’ ಎಂಬ ಇನ್‌ಸ್ಟಾಗ್ರಾಂ ಪೇಜ್‌ ಶೇರ್ ಮಾಡಿದೆ. ಇದನ್ನು ಲಕ್ಷಾಂತರ ಜನರು ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೆಂಪು ಟಿ–ಶರ್ಟ್ ಹಾಗೂ ನೀಲಿ ಬಣ್ಣದ ಚಪ್ಪಲಿ ತೊಟ್ಟಿರುವ ಪುಟಾಣಿ ಬಾಲಕಿ ಮನೆ ಮುಂದೆ ಕುಳಿತಿರುವಾಗ ಹಾವು ಬರುತ್ತದೆ. ಕೂಡಲೇ ಅದರ ಜೊತೆ ಆಟವಾಡುತ್ತಾಳೆ.

ADVERTISEMENT

ಈ ವಿಡಿಯೊವನ್ನು ಸಾವಿರಾರು ಜನರು ಶೇರ್ ಮಾಡಿರುವುದು ವಿಶೇಷ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.