ADVERTISEMENT

AI Ad tool ಪರೀಕ್ಷೆ ಆರಂಭಿಸಿದ ಮೆಟಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಮೇ 2023, 6:10 IST
Last Updated 12 ಮೇ 2023, 6:10 IST
ಮೆಟಾ
ಮೆಟಾ    

ನ್ಯೂಯಾರ್ಕ್‌: ಕೃತಕ ಬುದ್ಧಿಮತ್ತೆ ಉತ್ಪನ್ನ ರೇಸ್‌ಗೆ ಸಾಮಾಜಿಕ ಜಾಲತಾಣ ದೈತ್ಯ ಫೇಸ್‌ಬುಕ್‌ ಒಡೆತನದ ಮೆಟಾ ಕಂಪನಿ ಪ್ರವೇಶ ಮಾಡಿದೆ. ಇಮೇಜ್‌ ಬ್ಯಾಕ್‌ಗ್ರೌಂಡ್‌ (Image background) ಹಾಗೂ ಟೆಕ್ಸ್ಟ್‌ ವೇರಿಯೇಷನ್‌ (Text Variation) ಸೌಲಭ್ಯ ಕಲ್ಪಿಸುವ ಕೃತಕ ಬುದ್ಧಿಮತ್ತೆ ಆ್ಯಡ್ ಸಾಧನದ (artificial intelligence-powered ad tools) ಪ್ರಯೋಗ ಆರಂಭಿಸಿರುವುದಾಗಿ ಹೇಳಿದೆ.

AI Sandbox ಎಂದು ಈ ಟೂಲ್‌ಗೆ ಮೆಟಾ ನಾಮಕರಣ ಮಾಡಿದ್ದು, ಪ್ರಯೋಗಾರ್ಥವಾಗಿ ಕೆಲವು ಜಾಹೀರಾತುದಾರರನ್ನು ಮೆಟಾ ಆಹ್ವಾನಿಸಿದೆ.

ಗುರುವಾರ ನ್ಯೂಯಾರ್ಕ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮೆಟಾ ಈ ಮಾಹಿತಿ ನೀಡಿದೆ.

ADVERTISEMENT

ಪರೀಕ್ಷೆಯ ವೇಳೆ ಎಷ್ಟು ಜಾಹೀರಾತುದಾರರಿಗೆ ಇದರ ಆಕ್ಸೆಸ್‌ ಸಿಗಲಿದೆ ಎನ್ನುವುದರ ಬಗ್ಗೆ ಮೆಟಾ ಮಾಹಿತಿ ನೀಡಿಲ್ಲ. ಆದರೆ ಜುಲೈ ಹೊತ್ತಿಗೆ ಹಲವು ಜಾಹೀರಾತುದಾರರಿಗೆ ಇದರ ಆಕ್ಸೆಸ್‌ ಸಿಗಲಿದೆ ಎಂದು ಮೆಟಾ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.