ADVERTISEMENT

‘ಮೋದಿ ವಿಚಾರದಿಂದ ದೇಶ ಹಾಳಾಗ್ತಿದೆ’: ಹರಿಹಾಯ್ದ ರಾಹುಲ್ ಗಾಂಧಿ, ಚಿದಂಬರಂ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಮಾರ್ಚ್ 2020, 7:58 IST
Last Updated 6 ಮಾರ್ಚ್ 2020, 7:58 IST
ರಾಹುಲ್ ಗಾಂಧಿ
ರಾಹುಲ್ ಗಾಂಧಿ   

ಬಿಜೆಪಿ ಆಡಳಿತವನ್ನು ಟೀಕಿಸಲು ಕಾಂಗ್ರೆಸ್‌ಗೆಯೆಸ್ ಬ್ಯಾಂಕ್ ಬಿಕ್ಕಟ್ಟು ಒಂದು ಅಸ್ತ್ರವಾಗಿ ಒದಗಿದೆ.

ಬ್ಯಾಂಕ್‌ ಹೆಸರಿನಲ್ಲಿರುವ ‘ಯೆಸ್‌’ ಪದವನ್ನೇ ಲೇವಡಿ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ನೋ ಯೆಸ್ ಬ್ಯಾಂಕ್. ಮೋದಿ ಮತ್ತು ಅವರ ವಿಚಾರಗಳು ದೇಶದ ಆರ್ಥಿಕತೆಯನ್ನೇ ಹಾಳು ಮಾಡುತ್ತಿವೆ’ ಎಂದು ಹೇಳಿದ್ದಾರೆ.

ರಾಹುಲ್ ಟ್ವೀಟ್‌ಗೆ ಕಾಮೆಂಟ್ ಮಾಡಿರುವ ಹಲವರು ಯೆಸ್‌ ಬ್ಯಾಂಕ್‌ನ ಆಡಳಿತ ವಿದ್ಯಮಾನಗಳನ್ನು ಸರಿಯಾಗಿ ವರದಿ ಮಾಡದೆ ಮುಚ್ಚಿಟ್ಟ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿದ್ದಾರೆ.

ADVERTISEMENT

ಮತ್ತೋರ್ವ ಕಾಂಗ್ರೆಸ್ ನಾಯಕ ಪಿ.ಚಿದಂಬರಂ, ‘ಬಿಜೆಪಿಯ ಆಡಳಿತ ಸಾಮರ್ಥ್ಯಕ್ಕೆ ಇದು ನಿದರ್ಶನ’ ಎಂದು ವ್ಯಂಗ್ಯವಾಡಿದ್ದಾರೆ.

‘ಕಳೆದ ಆರು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆಡಳಿತ ನಡೆಸುವ ಮತ್ತು ಹಣಕಾಸು ಸಂಸ್ಥೆಗಳನ್ನು ನಿರ್ವಹಿಸುವ ಅವರ ಸಾಮರ್ಥ್ಯವನ್ನು ಯೆಸ್‌ ಬ್ಯಾಂಕ್ ಬಿಕ್ಕಟ್ಟು ಬಹಿರಂಗಗೊಳಿಸಿದೆ. ಆಗ ಪಿಎಂಸಿ ಬ್ಯಾಂಕ್ ಆಯ್ತು, ಈಗ ಯೆಸ್ ಬ್ಯಾಂಕ್. ಸರ್ಕಾರಕ್ಕೆ ಏನಾದರೂ ಕಾಳಜಿ ಎಂಬುದು ಇದೆಯೇ? ತನ್ನ ಜವಾಬ್ದಾರಿಯಿಂದ ಸರ್ಕಾರ ನುಣುಚಿಕೊಳ್ಳಲು ಸಾಧ್ಯವೇ? ಮತ್ತೊಂದು ಬ್ಯಾಂಕ್ ಇದೇ ಸಾಲಿನಲ್ಲಿದೆಯೇ?’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.