ADVERTISEMENT

ಟ್ವಿಟರ್‌ ನೂತನ ಸಿಇಒ ಲಿಂಡಾ ಯಾಕಾರಿನೊ

ಎಎಫ್‌ಪಿ
Published 12 ಮೇ 2023, 21:17 IST
Last Updated 12 ಮೇ 2023, 21:17 IST
ಲಿಂಡಾ ಯಾಕಾರಿನೊ –ಎಎಫ್‌ಪಿ ಚಿತ್ರ
ಲಿಂಡಾ ಯಾಕಾರಿನೊ –ಎಎಫ್‌ಪಿ ಚಿತ್ರ    

ಸ್ಯಾನ್‌ಫ್ರಾನ್ಸಿಸ್ಕೊ: ಟ್ವಿಟರ್‌ನ ನೂತನ ಸಿಒಇ ಆಗಿ ಲಿಂಡಾ ಯಾಕಾರಿನೊ ನೇಮಕವಾಗಿದ್ದಾರೆ.

‘ಲಿಂಡಾ  ಅವರು ಟ್ವಿಟರ್‌ನ ಸಂಪೂರ್ಣ ವ್ಯವಹಾರದ ಉಸ್ತುವಾರಿ ಹೊರಲಿದ್ದಾರೆ. ನಾನು ಇನ್ನು  ಪ್ರಾಡೆಕ್ಟ್‌ ಡಿಸೈನ್‌ ಮತ್ತು ಹೊಸ ತಂತ್ರಜ್ಞಾನದ ಮೇಲೆ ಗಮನ ಕೇಂದ್ರೀಕರಿಸುತ್ತೇನೆ’ ಎಂದು ಟ್ವಿಟರ್‌ ಮುಖ್ಯಸ್ಥ ಎಲಾನ್ ಮಸ್ಕ್‌ ತಿಳಿಸಿದ್ದಾರೆ.

ಲಿಂಡಾ ಅವರು 2011ರಿಂದಲೂ ಎನ್‌ಬಿಸಿ ಯೂನಿವ‌ರ್ಸಲ್‌ನ ಜಾಹೀರಾತು ಮತ್ತು ಪಾಲುದಾರಿಕೆ ವಿಭಾಗದ ಕಾರ್ಯ ನಿರ್ವಾಹಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ವರ್ಷ ಟ್ವಿಟರ್‌ ಖರೀದಿಸಿದ್ದ ಮಸ್ಕ್‌, ಸಿಇಒ ಆಗಿದ್ದ ಭಾರತದ ಪರಾಗ್‌ ಅಗ್ರವಾಲ ಅವರನ್ನು ವಜಾಗೊಳಿಸಿ ತಾವೇ ಅಧಿಕಾರ ವಹಿಸಿಕೊಂಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.