ADVERTISEMENT

ಪಬ್ಜಿ ನಿಷೇಧದ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಶುರುವಾಗಿದೆ ಮೀಮ್‌ಗಳ ಹಬ್ಬ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಸೆಪ್ಟೆಂಬರ್ 2020, 14:14 IST
Last Updated 2 ಸೆಪ್ಟೆಂಬರ್ 2020, 14:14 IST
ಪಬ್ಜಿ (ಸಾಂದರ್ಭಿಕ ಚಿತ್ರ)
ಪಬ್ಜಿ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಪಬ್ಜಿ ಸೇರಿದಂತೆ 118 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ಬುಧವಾರ ನಿಷೇಧಿಸಿದೆ. ಕೋಟ್ಯಂತರ ಭಾರತೀಯ ಮೊಬೈಲ್ ಮತ್ತು ಇಂಟರ್ನೆಟ್ ಬಳಕೆದಾರರ ಹಿತಾಸಕ್ತಿಗಳನ್ನು ಕಾಪಾಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ತಿಳಿಸಿದೆ.

ದೇಶದ ರಕ್ಷಣೆ ಮತ್ತು ಭದ್ರತೆ ಗಮನದಲ್ಲಿಟ್ಟುಕೊಂಡು ಈ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ ಎಂಬುದಾಗಿಯೂ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಪಬ್ಜಿ ಜೊತೆಗೆ ಪಬ್ಜಿ ಮೊಬೈಲ್ ಲೈಟ್, ವಿಚಾಟ್ ವರ್ಕ್‌, ವಿಚಾಟ್ ರೀಡಿಂಗ್‌ನಂತಹ ಮೊಬೈಲ್‌ ಆ್ಯಪ್‌ಗಳಿಗೂ ನಿಷೇಧ ಹೇರಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ADVERTISEMENT

ಭಾರತ ಹಾಗೂ ಪಾಕಿಸ್ತಾನದಲ್ಲಿ ಜನಪ್ರಿಯವಾಗಿದ್ದ ಪಬ್ಜಿ ಆ್ಯಪ್‌ಗೆ ನಿಷೇಧ ಹೇರಿರುವ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ನಗೆ ಉಕ್ಕಿಸುವ ಮೀಮ್‌ಗಳು ಹರಿದಾಡುತ್ತಿವೆ.

#PUBG ಎನ್ನುವ ಹ್ಯಾಶ್‌ಟ್ಯಾಗ್‌ ಸಹ ಟ್ವಿಟರ್‌ನಲ್ಲಿ ಟಾಪ್‌ ಟ್ರೆಂಡಿಂಗ್‌ನಲ್ಲಿದೆ. ತಮ್ಮ ಮಕ್ಕಳು ಪಬ್ಜಿ ಗೇಮ್‌ನ ವ್ಯಸನಿಗಳಾದ್ದರು. ಈಗ ಅದರಿಂದ ಮುಕ್ತಿ ಸಿಕ್ಕಿದೆ ಎಂದು ಪೋಷಕರು ನಿರಾಳರಾಗಿದ್ದಾರೆ. ಅವರು ದೇವರಿಗೆ ಧನ್ಯವಾದ ಅರ್ಪಿಸಿದ್ದಾರೆ ಎಂಬ ಸಂದೇಶವಿರುವ ಮೀಮ್‌ಗಳು ಟ್ವಿಟರ್‌ನಲ್ಲಿ ಹರಿದಾಡುತ್ತಿವೆ. ಇಲ್ಲಿವೆ ಕೆಲ ಮೀಮ್‌ಗಳು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.