ಭಾರತ, ಪಾಕಿಸ್ತಾನ
(ಐಸ್ಟೋಕ್ ಸಂಗ್ರಹ ಚಿತ್ರ)
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿ ಬೆನ್ನಲ್ಲೇ ದೇಶ ವಿರೋಧಿ, ಸುಳ್ಳು ಸುದ್ದಿಗಳನ್ನು ಹರಡುತ್ತಿರುವ ಪಾಕಿಸ್ತಾನದ 16 ಯೂಟ್ಯೂಬ್ ಚಾನಲ್‌ಗಳ ಮೇಲೆ ಕೇಂದ್ರ ಸರ್ಕಾರ ಇಂದು (ಸೋಮವಾರ) ಕಠಿಣ ಕ್ರಮ ಕೈಗೊಂಡಿದೆ.
ಭಾರತ, ಭಾರತೀಯ ಸೇನೆ, ಭದ್ರತಾ ಪಡೆಗಳ ವಿರುದ್ಧ ಪ್ರಚೋದನಕಾರಿ ಹಾಗೂ ಕೋಮು ಸೂಕ್ಷ್ಮತೆಯ ವಿಷಯವನ್ನು ಪ್ರಸಾರ ಮಾಡಿದ್ದಕ್ಕಾಗಿ ಮತ್ತು ಸುಳ್ಳು ಮತ್ತು ದಾರಿ ತಪ್ಪಿಸುವ ಸುದ್ದಿಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಪಾಕಿಸ್ತಾನದ 16 ಯೂಟ್ಯೂಬ್ ಚಾನಲ್‌ಗಳನ್ನು ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಗೃಹ ಸಚಿವಾಲದ ಶಿಫಾರಸುಗಳ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯಲ್ಲಿ 26 ಮಂದಿ ಮೃತಪಟ್ಟು, ಹಲವರು ಗಾಯಗೊಂಡಿದ್ದರು.
ಬಿಬಿಸಿಗೂ ಪತ್ರ...
ಅದೇ ವೇಳೆ ಪಹಲ್ಗಾಮ್ ದಾಳಿಯ ವರದಿಯಲ್ಲಿ ಭಯೋತ್ಪಾದಕರನ್ನು 'ಉಗ್ರಗಾಮಿಗಳು' ಎಂದು ಉಲ್ಲೇಖಿಸಿರುವುದಕ್ಕೆ ಸಂಬಂಧ ಬಿಬಿಸಿಗೆ ಪತ್ರ ಬರೆಯಲಾಗಿದ್ದು, ಕೇಂದ್ರ ಸರ್ಕಾರ ಸ್ಪಷ್ಟನೆ ಬಯಸಿದೆ.
ಸರ್ಕಾರ ನಿಷೇಧಿಸಿರುವ ಪಾಕಿಸ್ತಾನದ 16 ಯೂಟ್ಯೂಬ್ ಚಾನಲ್‌ಗಳ ಪಟ್ಟಿ:
ಡಾನ್ ನ್ಯೂಸ್,
ಇರ್ಷಾದ್ ಭಟ್ಟಿ,
ಸಮಾ ಟಿವಿ,
ARY ನ್ಯೂಸ್,
ಬೊಲ್ ನ್ಯೂಸ್,
ರಫ್ತಾರ್,
ದಿ ಪಾಕಿಸ್ತಾನ್ ರೆಫರನ್ಸ್,
ಜಿಯೋ ನ್ಯೂಸ್,
ಸಮಾ ಸ್ಪೋಟ್ಸ್,
ಜಿಎನ್‌ಎನ್,
ಉಜೈರ್ ಕ್ರಿಕೆಟ್,
ಉಮರ್ ಚೀಮಾ ಎಕ್ಸ್‌ಕ್ಲೂಸಿವ್,
ಅಸ್ಮಾ ಶಿರಾಜಿ,
ಮುನೀಬ್ ಫಾರೂಕ್,
ಸುನೋ ನ್ಯೂಸ್,
ರಾಝಿ ನಾಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.