ADVERTISEMENT

ಪೌರ ಕಾರ್ಮಿಕ ಮಹಿಳೆಯ ಪ್ರಾಮಾಣಿಕತೆ ಮೆಚ್ಚಿ ಚಿನ್ನದ ಸರ ನೀಡಿದ ನಟ ರಜನಿಕಾಂತ್

ಪಿಟಿಐ
Published 3 ಫೆಬ್ರುವರಿ 2026, 9:03 IST
Last Updated 3 ಫೆಬ್ರುವರಿ 2026, 9:03 IST
<div class="paragraphs"><p>ಪೌರ ಕಾರ್ಮಿಕ ಮಹಿಳೆಯ ಪ್ರಾಮಾಣಿಕತೆ ಮೆಚ್ಚಿ ಚಿನ್ನದ ಸರ ನೀಡಿದ ನಟ ರಜನಿಕಾಂತ್</p></div>

ಪೌರ ಕಾರ್ಮಿಕ ಮಹಿಳೆಯ ಪ್ರಾಮಾಣಿಕತೆ ಮೆಚ್ಚಿ ಚಿನ್ನದ ಸರ ನೀಡಿದ ನಟ ರಜನಿಕಾಂತ್

   

ಚಿತ್ರ: ಎಕ್ಸ್‌

ಚೆನ್ನೈ: ಕಳೆದ ತಿಂಗಳು ಚೆನ್ನೈನಲ್ಲಿ ಪೌರ ಕಾರ್ಮಿಕ ಮಹಿಳೆ ಎಸ್. ಪದ್ಮಾ ಅವರು ಕಸದ ಬುಟ್ಟಿಯಲ್ಲಿ ಸಿಕ್ಕ ₹45 ಲಕ್ಷ ಬೆಲೆಬಾಳುವ ಚಿನ್ನವನ್ನು ಪೊಲೀಸರಿಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದರು.

ADVERTISEMENT

ಪದ್ಮಾ ಅವರ ಕಾರ್ಯವನ್ನು ಮೆಚ್ಚಿ ನಟ ರಜನಿಕಾಂತ್‌ ಅವರು ನಿವಾಸಕ್ಕೆ ಆಹ್ವಾನಿಸಿ ಉಡುಗೊರೆ ನೀಡಿದ್ದಾರೆ. ಪದ್ಮಾ ಅವರಿಗೆ ಚಿನ್ನದ ಸರ ನೀಡಿ ಗೌರವಿಸಿದ್ದಾರೆ.

ರಜನಿಕಾಂತ್ ಅವರು ಪದ್ಮಾ ಅವರನ್ನು ಭೇಟಿಯಾದ ಫೋಟೊಗಳು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹರಿದಾಡುತ್ತಿವೆ.

ರಜನಿಕಾಂತ್‌ ಅವರನ್ನು ಭೇಟಿಯಾದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಪದ್ಮಾ, ‘ನನಗೆ ರೋಮಾಂಚನವಾಯಿತು. ನಾನು ಅವರನ್ನು ಭೇಟಿಯಾಗುತ್ತೇನೆ ಎಂದು ಎಂದಿಗೂ ನಿರೀಕ್ಷಿಸಿರಲಿಲ್ಲ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ತಮಿಳುನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರು ಪದ್ಮಾ ಅವರ ಪ್ರಾಮಾಣಿಕತೆಗೆ ಮೆಚ್ಚಿ ಸನ್ಮಾನಿಸಿ ₹1 ಲಕ್ಷದ ಚೆಕ್ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.