ADVERTISEMENT

ಯಾವ ಮೋಹನ ಮುರಳಿ ಕರೆಯಿತು ..

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 19:30 IST
Last Updated 8 ಜನವರಿ 2020, 19:30 IST
ವಿಶ್ವೇಶತೀರ್ಥ ಶ್ರೀಗಳ ಕಲಾಕೃತಿ
ವಿಶ್ವೇಶತೀರ್ಥ ಶ್ರೀಗಳ ಕಲಾಕೃತಿ   

ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರಮಠದ ವಿಶ್ವೇಶತೀರ್ಥ ಶ್ರೀಗಳು ಇತ್ತೀಚೆಗೆ ಕೃಷ್ಣೈಕ್ಯರಾದರು. ಅನೇಕರು ಶ್ರೀಗಳಿಗೆ ತಮ್ಮದೇ ಆದ ರೀತಿಯಲ್ಲಿ ಅಂತಿಮ ನಮನ ಸಲ್ಲಿಸಿದರು.

ಸಾಫ್ಟ್‌ವೇರ್‌ ಎಂಜಿನಿಯರ್‌ ಸಚಿನ್‌ ಸಂಘೆ ‘ಸೀಮೆಸುಣ್ಣ’ದಲ್ಲಿ ವಿಶ್ವೇಶತೀರ್ಥ ಶ್ರೀಗಳು ಶ್ರೀಕೃಷ್ಣನ ಕೈಹಿಡಿದು ಕೊಂಡು ಹೋಗುತ್ತಿರುವಂತಹ ಕಲಾಕೃತಿಯನ್ನು ರಚಿಸಿದ್ದಾರೆ. ಈ ಮೂಲಕ, ಶ್ರೀಗಳಿಗೆ ‘ಕಲಾ ನಮನ’ ಸಲ್ಲಿಸಿದ್ದಾರೆ. ಸುಮಾರು ಆರರಿಂದ ಏಳು ತಾಸುಗಳ ಪರಿಶ್ರಮದೊಂದಿಗೆ ಯಾವುದೇ ಲೆನ್ಸ್‌ ಬಳಸದೇ ಈ ಕಲಾಕೃತಿ ರಚಿಸಿದ್ದಾರೆ. ಕಲಾಕೃತಿ ರಚನೆಯನ್ನು ಕೆಳಗಿರುವ ಕ್ಯೂಆರ್‌ ಕೋಡ್‌ ಸ್ಕ್ಯಾನ್‌ ಮಾಡಿ ನೋಡಬಹುದು.

ಗೌರಿಬಿದನೂರು ಮುದುಗೆರೆಯ ಚಾಕ್‌ಫೀಸ್ ಕಲಾಕಾರ ಸಚಿನ್‌ ಸಂಘೆ ಬೆಂಗಳೂರಿನ ಸಿಸ್ಕೊ ಕಂಪನಿಯಲ್ಲಿ ಎಂಜಿನಿಯರ್‌ ಆಗಿದ್ದಾರೆ. ಚಾಕ್‌ಪೀಸ್‌ ಸೇರಿದಂತೆ ಸಣ್ಣ ವಸ್ತುಗಳಲ್ಲಿ ವೈವಿಧ್ಯಮಯ ಕಲಾಕೃತಿಗಳನ್ನು ರಚಿಸುವುದು ಅವರ ಹವ್ಯಾಸ. ಸಚಿನ್ ಅವರ ಈ ಹವ್ಯಾಸದ ಕುರಿತು ಇದೇ ಪುರವಣಿಯ ಡಿಸೆಂಬರ್ 5ರ ಸಂಚಿಕೆಯಲ್ಲಿ ‘ಚಾಕೃತಿ’ ಸಚಿನ್‌ ಶೀರ್ಷಿಕೆಯಡಿ ಲೇಖನ ಪ್ರಕಟವಾಗಿತ್ತು.

ADVERTISEMENT

ಮಾಹಿತಿ: ಅಜಯ್‌ ಗಾಯತೊಂಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.