ಸಿಮ್ರಾನ್ ಸಿಂಗ್
ಬೆಂಗಳೂರು: ಸೋಶಿಯಲ್ ಮೀಡಿಯಾ ಇನ್‌ಫ್ಲುಯನ್ಸರ್ ಹಾಗೂ ‘ಜಮ್ಮು ಕಿ ದಡಕನ್’ ಎಂದು ಖ್ಯಾತಿಯಾಗಿದ್ದ 25 ವರ್ಷದ ಚೆಲುವೆ ಸಿಮ್ರಾನ್ ಸಿಂಗ್ ಅವರ ಮೃತದೇಹ ಗುರುವಾರ ದೆಹಲಿ ಬಳಿಯ ಗುರುಗ್ರಾಮದ ಸೆಕ್ಟರ್ 27 ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ.
ಸಿಮ್ರಾನ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದೇ ಅಪಾರ್ಟ್‌ಮೆಂಟ್‌ನಲ್ಲಿ ಗೆಳೆಯನೊಂದಿಗೆ ಅವರು ವಾಸಿಸುತ್ತಿದ್ದರು. ಅವರ ಗೆಳೆಯನಿಗೆ ವಿಷಯ ತಿಳಿಸಲಾಗಿದೆ ಎಂದು ಹೇಳಿದ್ದಾರೆ.
ಜಮ್ಮು ಮೂಲದ ಸಿಮ್ರಾನ್ ಸಿಂಗ್ ಅವರು ರೆಡಿಯೊ ಜಾಕಿ ಸಹ ಆಗಿದ್ದರು. ಇನ್‌ಸ್ಟಾಗ್ರಾಂನಲ್ಲಿ 7 ಲಕ್ಷಕ್ಕೂ ಅಧಿಕ ಫಾಲೋವರ್ ಹೊಂದಿದ್ದ ಅವರು ಸ್ನೇಹಿತರಿಂದ ಜಮ್ಮು ಕಿ ದಡಕನ್ (ಜಮ್ಮುವಿನ ಹೃದಯ ಬಡಿತ) ಎಂದು ಕರೆಯಿಸಿಕೊಳ್ಳುತ್ತಿದ್ದರು.
ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.