ADVERTISEMENT

'ಎಣಿಕೆ ನಿಲ್ಲಿಸಿ': ಬಿಹಾರ ಚುನಾವಣೆಯ ತಮಾಷೆ ಟ್ವೀಟ್‌ಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ನವೆಂಬರ್ 2020, 10:07 IST
Last Updated 10 ನವೆಂಬರ್ 2020, 10:07 IST
ತೇಜಸ್ವಿ ಯಾದವ್ ಮತ್ತು ನಿತೀಶ್‌ ಕುಮಾರ್
ತೇಜಸ್ವಿ ಯಾದವ್ ಮತ್ತು ನಿತೀಶ್‌ ಕುಮಾರ್   

ಬಿಹಾರ ಚುನಾವಣೆ ಕುತೂಹಲಕಾರಿಘಟ್ಟ ಮುಟ್ಟಿರುವಂತೆ ಟ್ವೀಟ್‌ ಲೋಕದಲ್ಲಿ ಕಾಮಿಡಿ ಗರಿಗೆದರಿದೆ. ಕೆಲವರು ಮತಯಂತ್ರಗಳನ್ನು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು 'ಮತ ಎಣಿಕೆ ನಿಲ್ಲಿಸಿ' ಎಂದು ಟ್ರಂಪ್ ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲಿ ಚೀರುತ್ತಿದ್ದಾರೆ. ಕೆಲವರನ್ನು ಎಕ್ಸಿಟ್‌ ಪೋಲ್ ಸಮೀಕ್ಷೆಗಳು ಎಡವಿದ್ದೆಲ್ಲಿ ಎಂಬ ಪ್ರಶ್ನೆ ಕಾಡುತ್ತಿದೆ.

ಮಂಗಳವಾರ ಮುಂಜಾನೆಯಿಂದಲೂ #BiharElectionResults ಹ್ಯಾಷ್‌ಟ್ಯಾಗ್‌ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ. ಬಿಹಾರ ಚುನಾವಣೆಗೆ ಸಂಬಂಧಿಸಿದ ಒಂದಿಷ್ಟು ತಮಾಷೆ ಟ್ವೀಟ್‌ಗಳು ಇಲ್ಲಿವೆ ನೋಡಿ...

'ನಾನು ದೊಡ್ಡ ಅಂತರದಿಂದ ಗೆದ್ದಾಗಿದೆ. ಮತ ಎಣಿಕೆ ನಿಲ್ಲಿಸಿ' ಎಂದು ಬಾಬು ರಾವಲ್ ಎಂಬುವವರು ತಮಾಷೆ ಮಾಡಿದ್ದಾರೆ.

ADVERTISEMENT

'ಮತಗಟ್ಟೆ ಸಮೀಕ್ಷೆಗಳಿಗಿಂತಲೂ ಫಲಿತಾಂಶ ಉತ್ತಮವಾಗಿ ಬಂದಿದೆ. ಹೀಗಾಗಿ ಎನ್‌ಡಿಎಗೆ ಇದು ಸಂಭ್ರಮದ ಸಮಯ'.

ತೇಜಸ್ವಿಯನ್ನು ಮತಗಟ್ಟೆ ಸಮೀಕ್ಷೆಗಳು ಪ್ರಾಂಕ್ (ಕ್ಯಾಮೆರಾ ಮುಚ್ಚಿಟ್ಟು ಆಡುವ ಹುಡುಗಾಟ) ಆಗಿ ಬಳಸಿಕೊಂಡವು.

ಕಮಲಾ ಹ್ಯಾರಿಸ್ ಅವತಾರದಲ್ಲಿನಿತೀಶ್‌ ಕುಮಾರ್‌.

ಬಿಹಾರದ ಮುಂದಿನ ಮುಖ್ಯಮಂತ್ರಿಯನ್ನು ಭಾರತ ಕಾತರದಿಂದ ಎದುರು ನೋಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.