ADVERTISEMENT

ಪೊಲೀಸ್‌, ಪೊಲೀಸ್‌ ಎಂದು ಕೂಗಿದ ಪಂಜರದಲ್ಲಿದ್ದ ಗಿಳಿ: ಕಾರಣ ಏನು ಗೊತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಜನವರಿ 2026, 6:44 IST
Last Updated 9 ಜನವರಿ 2026, 6:44 IST
<div class="paragraphs"><p>ಮಾತನಾಡುವ ಗಿಳಿ</p></div>

ಮಾತನಾಡುವ ಗಿಳಿ

   

ಚಿತ್ರ ಕೃಪೆ:  @aalianadim

ಗಿಳಿ ಎಲ್ಲರಿಗೂ ಇಷ್ಟವಾಗುವ ಪಕ್ಷಿ. ಗಿಳಿಗೆ ಮಾತನಾಡುವ ಕಲೆಯೂ ಇದೆ. ಈ ಕಾರಣಕ್ಕಾಗಿ ಅನೇಕ ಮನೆಗಳಲ್ಲಿ ಗಿಳಿಗಳನ್ನು ಆಸಕ್ತಿಯಿಂದ ಸಾಕುತ್ತಾರೆ. ಅವುಗಳೊಂದಿಗೆ ಪ್ರತಿದಿನ ಮಾತಾಡುತ್ತಾರೆ. ಹೀಗೆ ಮಾತನಾಡುವ ಗಿಳಿಗಳಿಗೆ ದುಬಾರಿ ಬೆಲೆಯೂ ಇದೆ. ಇಲ್ಲೊಂದು ಸಾಕು ಗಿಳಿ ಮನೆಯ ಒಡತಿಗೆ ಬೆದರಿಕೆ ಹಾಕಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. 

ADVERTISEMENT

ಆಲಿಯಾ ನಾದಿಮ್ ಎಂಬ ಎಕ್ಸ್ ಬಳಕೆದಾರರು ತಮ್ಮ ಖಾತೆಯಲ್ಲಿ ವಿಡಿಯೊವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೊದಲ್ಲಿ ಸಾಕು ಗಿಳಿಯೊಂದು ಪಂಜರದಲ್ಲಿ ಕುಳಿತು ತನ್ನ ಮಾಲೀಕರಿಗೆ ಟೊಮೆಟೊ ಕೊಡುವಂತೆ ಕೇಳಿದೆ. ಇದಕ್ಕೆ ನಿರಾಕರಿಸಿದ ಮನೆಯ ಮಾಲೀಕರಿಗೆ, ಪೊಲೀಸರಿಗೆ ಕರೆ ಮಾಡುವುದಾಗಿ ಬೆದರಿಕೆ ಹಾಕಿದೆ. ಅಷ್ಟಕ್ಕೇ ಸುಮ್ಮನಾಗದ ಗಿಳಿ ಪೊಲೀಸ್‌, ಪೊಲೀಸ್‌, ಪೊಲೀಸ್‌ ಎಂದು ಕೂಗಿದೆ.

ಈ ಚತುರ ಗಿಳಿಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

’ಮಾತನಾಡುವಾಗ ಗಿಳಿಗಳು ತುಂಬಾ ಮುದ್ದಾಗಿ ಕಾಣುತ್ತವೆ’, ’ಗಿಳಿಗೂ ಹೆದರುವ ಕಾಲ ಬಂದಿದೆ’, ’ಮಹಿಳೆಗೆ ಗಿಳಿ ಬ್ಲಾಕ್ ಮೇಲ್ ಮಾಡುತ್ತಿದೆ’ ಹೀಗೆ ತರಹೇವಾರಿ ಕಮೆಂಟ್‌ಗಳನ್ನು ನೀಡಿದ್ದಾರೆ. ಈ ವಿಡಿಯೊ 14 ಸಾವಿರಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.