ADVERTISEMENT

ದಲೈಲಾಮಾಗೆ 85ನೇ ಜನ್ಮದಿನ: ಟ್ವಿಟರ್‌ನಲ್ಲಿ #FreeTibet ಟ್ರೆಂಡ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜುಲೈ 2020, 9:04 IST
Last Updated 6 ಜುಲೈ 2020, 9:04 IST
ಟಿಬೆಟನ್‌ ಧಾರ್ಮಿಕ ಗುರು ದಲೈಲಾಮಾ
ಟಿಬೆಟನ್‌ ಧಾರ್ಮಿಕ ಗುರು ದಲೈಲಾಮಾ   

ಬೆಂಗಳೂರು: ಸೋಮವಾರ ಟಿಬೆಟನ್‌ ಧಾರ್ಮಿಕ ಗುರು ದಲೈಲಾಮಾ ಅವರ 85ನೇ ವರ್ಷದ ಹುಟ್ಟಿದ ದಿನ. ಚೀನಾದೊಂದಿಗೆ ಗಡಿ ವಿವಾದ ಹೊಂದಿರುವ ಅರುಣಾಚಲ ಪ್ರದೇಶ ಮತ್ತು ಲಡಾಕ್‌ ಎರಡೂ ಭಾಗಗಳಿಂದ ದಲೈಲಾಮಾ ಅವರಿಗೆ ಜನ್ಮದಿನದ ಶುಭಾಶಯಗಳು ಹರಿದು ಬಂದಿವೆ. ಇದರೊಂದಿಗೆ ಟಿಬೆಟ್‌ ಸ್ವತಂತ್ರಗೊಳಿಸುವ ಕುರಿತಾದ ಟ್ವೀಟ್‌ಗಳು ಫ್ರೀಟಿಬೆಟ್‌( #FreeTibet) ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ರೆಂಡ್ ಆಗಿವೆ.

ಭಾರತ–ಚೀನಾ ಗಡಿಯ ಭಾಗದಲ್ಲಿ ಪ್ರಕ್ಷುಬ್ಧತೆಯ ನಡುವೆ ಲಡಾಖ್‌; ಹೊಸ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್‌ ಗವರ್ನರ್‌ ಆರ್‌.ಕೆ.ಮಾಥುರ್‌ ಅಧಿಕೃತ ಟ್ವಿಟರ್ ಖಾತೆಯ ಮೂಲಕ ದಲೈಲಾಮಾ ಅವರಿಗೆ ಶುಭಕೋರಿದ್ದಾರೆ. ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಸಹ ಟ್ವೀಟ್ ಮಾಡಿದ್ದಾರೆ.


ದಲೈಲಾಮಾ ಅವರಿಗೆ ಶುಭಾಶಯ ತಿಳಿಸಿರುವ ಹಲವು ಟ್ವೀಟಿಗರು, 'ಶಾಂತಿ ಪ್ರಿಯರನ್ನು ಅವರ ಪಾಡಿಗೆ ಬಿಡಿ ಚೀನೀಯರೇ', 'ಮೂಲ ಟಿಬೆಟಿಯನ್ನರು ಅವರ ನೆಲದಲ್ಲಿಯೇ ಅಲ್ಪ ಸಂಖ್ಯಾತರಾಗುತ್ತಿದ್ದಾರೆ', 'ಈಗಲಾದರೂ ಟಿಬೆಟ್‌ ಸ್ವತಂತ್ರವಾಗಬೇಕು', 'ಯಾವತ್ತಿಗೂ ಭಾರತ ಚೀನಾದೊಂದಿಗೆ ಗಡಿ ಹಂಚಿಕೊಂಡಿಯೇ ಇಲ್ಲ. ಅದು ಇಂಡೋ–ಟಿಬೆಟ್‌ ಗಡಿ ಪ್ರದೇಶ', 'ಅದು ಚೀನಾದ ನೆಲೆಯಲ್ಲಿ ಅನಧಿಕೃತವಾಗಿ ಆಕ್ರಮಿಸಿಕೊಂಡಿರುವುದು',... ಇಂಥ ಹಲವು ಟ್ವೀಟ್‌ಗಳನ್ನು ಪ್ರಕಟಗೊಂಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.