ಬೆಂಗಳೂರು: ಯೋಗ ಗುರು ಬಾಬಾ ರಾಮದೇವ್ ಅವರು ಸಮಾಜ ಸುಧಾರಕ ಪೆರಿಯಾರ್‌ನ್ನು ಅವಮಾನಿಸಿದ್ದಾರೆ ಎಂದು ಟ್ವೀಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಪತಂಜಲಿ ಯೋಗಪೀಠ ಹರಿದ್ವಾರದ ಟ್ವೀಟರ್ ಖಾತೆಯಟ್ವೀಟೊಂದು ಟ್ವಿಟರ್‌ನಲ್ಲಿ ಹರಿದಾಡುತ್ತಿದ್ದು ಇದರಲ್ಲಿ ಪೆರಿಯಾರ್‌ನಂತಹ ನಿಕೃಷ್ಟ ಜನರು ದೇಶದ ಏಕತೆಯನ್ನು ಮುರಿಯುವ ದುಷ್ಕೃತ್ಯ ಮಾಡಿದ್ದಾರೆ ಎಂದಿದೆ. ಈ ಟ್ವೀಟ್‌ನ ಸ್ಕ್ರೀನ್‌ಶಾಟ್ ರಿಟ್ವೀಟ್ ಮಾಡಿದ ಟ್ವೀಟಿಗರು ರಾಮದೇವ್ ಬಾಬಾ ವಿರುದ್ಧ ಕಿಡಿಕಾರಿದ್ದು #Ramdev_Insults_Periyar ಮತ್ತು #shutdownPatanjali ಎಂಬ ಹ್ಯಾಶ್‌ಟ್ಯಾಗ್ ಟ್ರೆಂಡ್ ಮಾಡಿದ್ದಾರೆ.
ರಿಪಬ್ಲಿಕ್ ಟಿವಿಗೆ ನೀಡಿದ ಸಂದರ್ಶನವೊಂದರಲ್ಲಿ ಬಾಬಾ ರಾಮದೇವ್, ಪೆರಿಯಾರ್ ಮತ್ತು ಅಂಬೇಡ್ಕರ್ ಅನುಯಾಯಿಗಳ ಬಗ್ಗೆ ಟೀಕೆ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.