ADVERTISEMENT

ನಕಲಿ ಖಾತೆ ಕುರಿತು ಇಲಾನ್ ಮಸ್ಕ್‌ಗೆ ಮಾಹಿತಿ ನೀಡಲಿದೆ ಟ್ವಿಟರ್

ರಾಯಿಟರ್ಸ್
Published 9 ಜೂನ್ 2022, 2:41 IST
Last Updated 9 ಜೂನ್ 2022, 2:41 IST
   

ನಕಲಿ ಖಾತೆಗಳ ಕುರಿತು ಮಾಹಿತಿಯನ್ನು ಇಲಾನ್ ಮಸ್ಕ್ ಅವರಿಗೆ ನೀಡಲು ಟ್ವಿಟರ್ ಮುಂದಾಗಿದೆ.

ಟ್ವಿಟರ್‌ನಲ್ಲಿರುವ ನಕಲಿ ಖಾತೆಗಳ ಕುರಿತು ಸೂಕ್ತ ಮಾಹಿತಿ ನೀಡದಿದ್ದರೆ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಾಗಿ ಉದ್ಯಮಿ ಇಲಾನ್ ಮಸ್ಕ್ ಘೋಷಿಸಿದ್ದರು.

ಅದಾದ ಬಳಿಕ ಟ್ವಿಟರ್‌ನಲ್ಲಿರುವ ನಕಲಿ ಖಾತೆಗಳ ವಿವರ ನೀಡುವಂತೆ ಕಂಪನಿಗೆ ಒತ್ತಡ ಹೆಚ್ಚಾಗಿತ್ತು.

ADVERTISEMENT

ಜತೆಗೆ, ಆಡಳಿತ ಮಂಡಳಿಗೆ ಈ ಬಗ್ಗೆ ವಿವರಣೆ ಕೇಳಿದ್ದ ಇಲಾನ್ ಮಸ್ಕ್, ನಕಲಿ ಖಾತೆಗಳೆಲ್ಲವನ್ನೂ ಟ್ವಿಟರ್‌ನಿಂದ ತೆಗೆದುಹಾಕುವಂತೆ ಹೇಳಿದ್ದರು.

ಬಾಟ್ ಮತ್ತು ಸ್ಪಾಮ್ ಖಾತೆಗಳು ಇರುವುದರಿಂದ ಟ್ವಿಟರ್‌ನಲ್ಲಿ ನಕಲಿ ಟ್ವೀಟ್ ಹಾವಳಿ ಹೆಚ್ಚಾಗುತ್ತಿದೆ ಎಂದು ಇಲಾನ್ ಮಸ್ಕ್ ಆರೋಪಿಸಿದ್ದರು. ಜತೆಗೆ ಅವುಗಳನ್ನು ಸಂಪೂರ್ಣವಾಗಿ ತೆಗೆದುಹಾಕುವಂತೆ ಟ್ವಿಟರ್ ಮಂಡಳಿಗೆ ಸೂಚಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.