ADVERTISEMENT

ಭಾರತದಲ್ಲಿಯೂ ಉದ್ಯೋಗ ಕಡಿತಕ್ಕೆ ಮುಂದಾದ ಟ್ವಿಟರ್

ಪಿಟಿಐ
Published 4 ನವೆಂಬರ್ 2022, 20:47 IST
Last Updated 4 ನವೆಂಬರ್ 2022, 20:47 IST
Twitter
Twitter   

ನವದೆಹಲಿ: ಜಾಗತಿಕ ಮಟ್ಟದಲ್ಲಿ ಉದ್ಯೋಗ ಕಡಿತ ಮಾಡುವುದರ ಭಾಗವಾಗಿ ಟ್ವಿಟರ್ ಕಂಪನಿಯು ಭಾರತದಲ್ಲಿಯೂ ನೌಕರರನ್ನು ಕೆಲಸದಿಂದ ತೆಗೆಯಲು ಆರಂಭಿಸಿದೆ.‌ ಟ್ವಿಟರ್‌ ಕಂಪನಿಯ ನೂತನ ಮಾಲೀಕ ಎಲಾನ್ ಮಸ್ಕ್ ಅವರು ಉದ್ಯೋಗ ಕಡಿತಕ್ಕೆ ಮುಂದಾಗಿದ್ದಾರೆ.

ಭಾರತದಲ್ಲಿನ ಮಾರುಕಟ್ಟೆ ಹಾಗೂ ಸಂವಹನ ವಿಭಾಗದ ಅಷ್ಟೂ ನೌಕರ
ರನ್ನು ಕೆಲಸದಿಂದ ತೆಗೆಯಲಾಗಿದೆ ಎಂದು ಗೊತ್ತಾಗಿದೆ. ‘ನೌಕರಿಯಿಂದ ತೆಗೆ
ಯುವ ಕಾರ್ಯ ಆರಂಭವಾಗಿದೆ. ನನ್ನ ಕೆಲವು ಸಹೋದ್ಯೋಗಿಗಳಿಗೆ ಈ
ವಿಚಾರವಾಗಿ ಇಮೇಲ್ ಬಂದಿದೆ’ ಎಂದು ಟ್ವಿಟರ್ ಇಂಡಿಯಾ ನೌಕರರೊ
ಬ್ಬರು ತಿಳಿಸಿದ್ದಾರೆ. ಈ ವಿಚಾರವಾಗಿ ಟ್ವಿಟರ್ ಇಂಡಿಯಾ ಪ್ರತಿಕ್ರಿಯೆ ಲಭ್ಯವಾಗಿಲ್ಲ.

‘ಟ್ವಿಟರ್ ಕಂಪನಿಯನ್ನು ಆರೋಗ್ಯಕರ ಹಾದಿಗೆ ತರುವ ಪ್ರಯತ್ನವಾಗಿ ನಾವು ನಮ್ಮ ಜಾಗತಿಕ ಉದ್ಯೋಗಿಗಳ ಸಂಖ್ಯೆಯನ್ನು ಕಡಿತಮಾಡುವ ಕಷ್ಟದ ಪ್ರಕ್ರಿಯೆಯನ್ನು ಶುಕ್ರವಾರ ಆರಂಭಿಸಲಿದ್ದೇವೆ’ ಎಂದು ಕಂಪನಿಯು ನೌಕರರಿಗೆ ಈ ಮೊದಲು ತಿಳಿಸಿತ್ತು. ನೌಕರರ ಸುರಕ್ಷತೆ ಹಾಗೂ ಟ್ವಿಟರ್‌ ವ್ಯವಸ್ಥೆಯ ಮತ್ತು ಗ್ರಾಹಕರ ದತ್ತಾಂಶ ಸುರಕ್ಷತೆಯ ದೃಷ್ಟಿಯಿಂದ ಕಂಪನಿಯು ತನ್ನ ಎಲ್ಲ ಕಚೇರಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಿದೆ. ‘ನೀವು ಕಚೇರಿಯಲ್ಲಿ ಇದ್ದರೆ ಅಥವಾ ಕಚೇರಿಗೆ ಬರುವ ಮಾರ್ಗದಲ್ಲಿದ್ದರೆ ದಯವಿಟ್ಟ ಮನೆಗೆ ವಾಪಸ್ಸಾಗಿ’ ಎಂದು ಕಂಪನಿಯು ತಿಳಿಸಿತ್ತು. ಟ್ವಿಟರ್ ಕಂಪನಿಯು ಅಭಿವ್ಯಕ್ತಿ ಸ್ವಾತಂತ್ರ್ಯದ ವಿಚಾರವಾಗಿ ಕೇಂದ್ರ ಸರ್ಕಾರದ ಜೊತೆ ಹಲವು ಬಾರಿ ವಾಗ್ವಾದ ನಡೆಸಿದೆ. ಈಗ ಕಂಪನಿಯು ತನ್ನ ಗೋಪ್ಯ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಮಾಧ್ಯಮಗಳ ಜೊತೆ ಮಾತುಕತೆ ನಡೆಸಬಾರದು ಎಂದು ನೌಕರರಿಗೆ ಸೂಚಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.