ADVERTISEMENT

WhatsApp | ಚಾಟ್‌ ಲಿಸ್ಟ್‌ನಲ್ಲಿಯೇ ಸ್ಟೇಟಸ್ ಅಪ್‌ಡೇಟ್ ವೀಕ್ಷಿಸುವ ಅಪ್‌ಡೇಟ್

ನೂತನ ಅಪ್‌ಡೇಟ್ ಶೀಘ್ರದಲ್ಲೇ ಬಳಕೆದಾರರಿಗೆ ಲಭ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಆಗಸ್ಟ್ 2022, 8:36 IST
Last Updated 23 ಆಗಸ್ಟ್ 2022, 8:36 IST
   

ಬೆಂಗಳೂರು: ಮೆಟಾ ಒಡೆತನದ ‘ವಾಟ್ಸ್‌ಆ್ಯಪ್‘ ಹೊಸ ಹೊಸ ಅಪ್‌ಡೇಟ್‌ಗಳ ಮೂಲಕ ಬಳಕೆದಾರರಿಗೆ ಆಕರ್ಷಕ ಫೀಚರ್‌ಗಳನ್ನು ನೀಡುತ್ತಾ ಬರುತ್ತಿದೆ.

ಈ ಬಾರಿ ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್‌ನಲ್ಲಿ ಇರುವಂತೆಯೇ, ಚಾಟ್ ಲಿಸ್ಟ್‌ನಲ್ಲಿಯೇ ಸ್ಟೇಟಸ್ ಅಪ್‌ಡೇಟ್ ನೀಡಲು ಕಾರ್ಯನಿರತವಾಗಿದೆ.

ವಾಟ್ಸ್‌ಆ್ಯಪ್ ಬಿಡುಗಡೆ ಮಾಡಲಿರುವ ಹೊಸ ಅಪ್‌ಡೇಟ್, ಪ್ರಸ್ತುತ ಪರೀಕ್ಷಾರ್ಥ ಬಳಕೆಯಲ್ಲಿದೆ. ಬೀಟಾ ಆವೃತ್ತಿ ಪರಿಶೀಲನೆಯ ಬಳಿಕ ಎಲ್ಲ ಬಳಕೆದಾರರಿಗೆ ದೊರೆಯಲಿದೆ.

ADVERTISEMENT

ವಾಬೀಟಾಇನ್ಫೋ ಈ ಕುರಿತು ವರದಿ ಮಾಡಿದ್ದು, ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ಇರುವ ಮಾದರಿಯಲ್ಲೇ, ಚಾಟ್ ಜತೆಗೇ, ಲಿಸ್ಟ್‌ನಲ್ಲಿರುವ ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿದರೆ, ಅವರ ಸ್ಟೇಟಸ್ ಕಾಣಿಸಲಿದೆ.

ಆ್ಯಂಡ್ರಾಯ್ಡ್ ಮತ್ತು ಐಫೋನ್‌ಗಳಲ್ಲಿ ನೂತನ ಅಪ್‌ಡೇಟ್ ದೊರೆಯಲಿದ್ದು, ಈಗಾಗಲೇ ಮೆಟಾ, ಬೀಟಾ ಆವೃತ್ತಿ ಬಿಡುಗಡೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.