ADVERTISEMENT

ಯುಟ್ಯೂಬ್ ಜರ್ನಿ: ಅಪ್‌ಲೋಡ್‌ ಮಾಡಿದ ಮೊದಲ ವಿಡಿಯೊ ಯಾವುದು ಗೊತ್ತೆ?

​ಪ್ರಜಾವಾಣಿ ವಾರ್ತೆ
Published 13 ಜೂನ್ 2022, 6:20 IST
Last Updated 13 ಜೂನ್ 2022, 6:20 IST
ಯುಟ್ಯೂಬ್
ಯುಟ್ಯೂಬ್   

ಜನಪ್ರಿಯ ವಿಡಿಯೊ ವೇದಿಕೆಯಾಗಿರುವ ಸಾಮಾಜಿಕ ಮಾಧ್ಯಮ ಯುಟ್ಯೂಬ್‌ ಅನ್ನು ಕೋಟ್ಯಂತರ ಜನರು ಬಳಕೆ ಮಾಡುತ್ತಿದ್ದಾರೆ

ಯುಟ್ಯೂಬ್‌ ಅಧಿಕೃತವಾಗಿ ಪ್ರಾರಂಭವಾಗಿದ್ದು 2005, ಫೆಬ್ರುವರಿ 14ರಂದು. ಗೆಳೆಯರಾದ ಜಾವೇದ್‌ ಕರೀಮ್‌, ಸ್ವೀವ್‌ ವೆನ್‌, ಚಾರ್ಡ್‌ ಹರ್ಲಿ ಯುಟ್ಯೂಬ್‌ ಸ್ಥಾಪಕರು. ಇವರು ಅಮೆರಿಕದ ಇ–ಕಾಮರ್ಸ್‌ ಕಂಪನಿಯಲ್ಲಿನ ಕೆಲಸ ಬಿಟ್ಟು ಯುಟ್ಯೂಬ್ ಪ್ರಾರಂಭಿಸುತ್ತಾರೆ.

ಯುಟ್ಯೂಬ್‌ ಪ್ರಾರಂಭ ಮಾಡಿ ಎರಡು ತಿಂಗಳ ನಂತರ ಈ ತಂಡ ಮೊದಲ ವಿಡಿಯೊ ಅಪ್‌ಲೋಡ್‌ ಮಾಡುತ್ತಾರೆ. ನಂತರ ಬಳಕೆದಾರರಿಗೆ ವಿಡಿಯೊಗಳನ್ನು ಅಪ್‌ಲೋಡ್‌ ಮಾಡುವ ಅವಕಾಶ ಕಲ್ಪಿಸುತ್ತಾರೆ. ಒಂದೇ ವರ್ಷ 2.5 ಕೋಟಿಗೂ ಹೆಚ್ಚು ವಿಡಿಯೊಗಳ ಅಪ್‌ಲೋಡ್‌ ಆಗುತ್ತವೆ.

ADVERTISEMENT

ಯುಟ್ಯೂಬ್‌ ಚಾಲನೆಗೊಂಡು ಇಲ್ಲಿಗೆ 17 ವರ್ಷಗಳು ಸಂದಿವೆ. ಕೋಟ್ಯಂತರ ವಿಡಿಯೊಗಳು ಈ ವೇದಿಕೆಯಲ್ಲಿ ಲಭ್ಯವಿವೆ. ಜಗತ್ತಿನಕ್ಷೇತ್ರದವಿಡಿಯೊಗಳು, ಮಾಹಿತಿಈ ವೇದಿಕೆಯಲ್ಲಿ ಸಿಗಲಿದೆ.

ಯುಟ್ಯೂಬ್‌ ಸಹ ಸಂಸ್ಥಾಪಕ ಜಾವೇದ್‌ ಕರೀಮ್‌ ಅವರು ತಮ್ಮ ಚಾನೆಲ್‌ ಮೂಲಕ ಯುಟ್ಯೂಬ್‌ಗೆ ಮೊದಲ ವಿಡಿಯೊವನ್ನು ಅಪ್‌ಲೋಡ್‌ ಮಾಡಿದ್ದಾರೆ. ಏಪ್ರಿಲ್‌ 23, 2005ರಂದು ಜಾವೇದ್‌ ಅವರು ‘Me at the zoo' ವಿಡಿಯೊವನ್ನು ಅಪ್‌ಲೋಡ್‌ ಮಾಡಿದ್ದರು. 18 ಸೆಂಕೆಡ್‌ಗಳ ಈ ವಿಡಿಯೊ ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿರುವ ಮೊದಲ ವಿಡಿಯೊ ಎಂಬ ಹೆಗ್ಗಳಿಕೆ ಪಾತ್ರವಾಗಿದೆ.

‘Me at the zoo' ವಿಡಿಯೊ ಇಲ್ಲಿಯವರೆಗೂ 235 ಕೋಟಿಗೂ ಹೆಚ್ಚು ವೀಕ್ಷಣೆ ಕಂಡಿದೆ. ಗೂಗಲ್‌ ವೆಬ್‌ಸೈಟ್‌ ಬಳಿಕ ಯುಟ್ಯೂಬ್‌ ಹೆಚ್ಚು ಜನಪ್ರಿಯ ವೇದಿಕೆಯಾಗಿದೆ. ದಿನಕ್ಕೆಕೋಟ್ಯಂತರ ಜನರು ಯುಟ್ಯೂಬ್‌ ವೀಕ್ಷಣೆ ಮಾಡುತ್ತಾರೆ ಎಂದು ಯುಟ್ಯೂಬ್‌ ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.