ADVERTISEMENT

ಗೂಗಲ್‌: ಜಿಮೇಲ್‌ ಸೇವೆಯಲ್ಲಿ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 6:59 IST
Last Updated 20 ಆಗಸ್ಟ್ 2020, 6:59 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   
""

ನವದೆಹಲಿ:ಭಾರತ ಸೇರಿದಂತೆ ವಿಶ್ವದ ಹಲವೆಡೆ ಇಮೇಲ್ ಸೇವೆ ಒದಗಿಸುವ ಗೂಗಲ್‌ನ ಜಿಮೇಲ್‌ ಸೇವೆಯಲ್ಲಿ ವ್ಯತ್ಯಯವಾಗಿದ್ದು ಬಳಕೆದಾರರು ಸಂದೇಶ ಕಳುಹಿಸಲು ಸಾಧ್ಯವಾಗುತ್ತಿಲ್ಲ.

ಗೂಗಲ್‌ ಕಂಪನಿ ಜಿಮೇಲ್‌ ಡೌನ್‌ ಆಗಿರುವುದನ್ನು ಖಚಿತಪಡಿಸಿದ್ದುಸಾಧ್ಯವಾದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸುವುದಾಗಿ ತಿಳಿಸಿದೆ.

ಜಿಮೇಲ್‌ ಡೌನ್‌ ಮ್ಯಾಪ್‌

ಭಾರತದಲ್ಲಿ ಬೆಳಗ್ಗೆ 11 ಗಂಟೆಯಿಂದ ಈ ಸಮಸ್ಯೆ ಎದುರಾಗಿದೆ. ಜಿಮೇಲ್‌ನಲ್ಲಿ ಚಿತ್ರಗಳು, ವಿಡಿಯೊಗಳುಹಾಗೂ ಫೈಲ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ. ಜಿಮೇಲ್‌ನ ವೈಯಕ್ತಿಕ ಖಾತೆಗಳಲ್ಲಿ ದೊಡ್ಡ ದೊಡ್ಡ ಮೇಸೆಜ್‌ಗಳನ್ನು ಕಳಹಿಸಲು ಆಗುತ್ತಿಲ್ಲ ಎಂದು ಬಳಕೆದಾರರು ದೂರಿದ್ದಾರೆ.

ADVERTISEMENT

ಭಾರತ ಸೇರಿದಂತೆ ಏಷ್ಯಾ, ಯುರೋಪ್‌ ಹಾಗೂ ಅಮೆರಿಕ ಖಂಡದ ಹಲವು ದೇಶಗಳಲ್ಲಿ ಈ ಸಮಸ್ಯೆ ಉಂಟಾಗಿದೆ. ಜಿಸ್ಯೂಟ್‌ ಸೇರಿದಂತೆ, ಗೂಗಲ್‌ ಡ್ರೈವ್‌ ಸೇವೆಯಲ್ಲೂ ಸಮಸ್ಯೆಯಾಗಿದೆ. ಮಾಹಿತಿ, ಚಿತ್ರ, ವಿಡಿಯೊಗಳನ್ನು ಅಪ್‌ಲೋಡ್‌ ಮಾಡಲು ಮತ್ತು ಡೌನ್‌ಲೋಡ್‌ ಮಾಡಲು ಆಗುತ್ತಿಲ್ಲ ಎಂದು ಬಳಕೆದಾರರು ತಿಳಿಸಿದ್ದಾರೆ.

ಗೂಗಲ್‌ ಕಂಪನಿಜಿಮೇಲ್‌ ಸೇವೆಯಲ್ಲಿ ತೊಂದರೆಯಾಗಿರುವುದರ ಬಗ್ಗೆ ಜಿಸ್ಯೂಟ್‌ಡ್ಯಾಶ್‌ ಬೋರ್ಡ್‌ನಲ್ಲಿ ಪ್ರಕಟಿಸಿದೆ. ಸಮಸ್ಯೆ ಬಗ್ಗೆ ತಂತ್ರಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಮಧ್ಯಾಹ್ನ 1.30ಕ್ಕೆ ನೀಡಲಾಗುವುದು ಎಂದು ಗೂಗಲ್‌ ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.