ADVERTISEMENT

ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಸೈಬರ್ ದಾಳಿ ಸಾಧ್ಯತೆ: ಇಟಲಿ ಸಂಸ್ಥೆ ಎಚ್ಚರಿಕೆ

ಐಎಎನ್ಎಸ್
Published 6 ಫೆಬ್ರುವರಿ 2023, 8:32 IST
Last Updated 6 ಫೆಬ್ರುವರಿ 2023, 8:32 IST
   

ರೋಮ್‌: ಜಗತ್ತಿನಾದ್ಯಂತ ದೊಡ್ಡ ಮಟ್ಟದಲ್ಲಿ ಸೈಬರ್‌ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಇಟಲಿಯ ರಾಷ್ಟ್ರೀಯ ಸೈಬರ್‌ ಭದ್ರತಾ ಸಂಸ್ಥೆ ಹೇಳಿದೆ. ಸಿಸ್ಟಮ್‌ಗಳನ್ನು ರಕ್ಷಿಸಿಕೊಳ್ಳುವಂತೆ ಅದು ಜಗತ್ತಿನ ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.

ಹಣ ಪಾವತಿಸುವವರೆಗೆ ಕಂಪ್ಯೂಟರ್‌ಗೆ ಪ್ರವೇಶ ನಿರ್ಬಂಧಿಸುವಂತೆ ವಿನ್ಯಾಸಗೊಳಿಸಲಾದ ದುರುದ್ದೇಶಪೂರಿತ ಸಾಫ್ಟ್‌ವೇರ್‌ನಿಂದಾಗಿ ಈಗಾಗಲೇ ಜಗತ್ತಿನ ಸಾವಿರಾರು ಕಂಪ್ಯೂಟರ್‌ಗಳಿಗೆ ಹಾನಿಯಾಗಿದೆ ಎಂದು ‘ಯುರೋ ವೀಕ್ಲಿ ನ್ಯೂಸ್’ ವರದಿ ಮಾಡಿದೆ.

ಅಮೆರಿಕ, ಕೆನಡಾ, ಫಿನ್‌ಲ್ಯಾಂಡ್ ಮತ್ತು ಫ್ರಾನ್ಸ್ ಸೇರಿದಂತೆ ಜಾಗತಿಕವಾಗಿ ಸರ್ವರ್‌ಗಳಿಗೂ ಇದರಿಂದ ಹಾನಿಯಾಗಿದೆ ಎಂದು ಇಟಾಲಿಯ ಸುದ್ದಿವಾಹಿನಿಗಳು ವರದಿ ಮಾಡಿವೆ.

ADVERTISEMENT

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.