ADVERTISEMENT

ಅಮೆಜಾನ್ ಸಿಇಒ ಹುದ್ದೆ ತ್ಯಜಿಸಲಿರುವ ಜೆಫ್ ಬೆಜೋಸ್

ಏಜೆನ್ಸೀಸ್
Published 3 ಫೆಬ್ರುವರಿ 2021, 5:06 IST
Last Updated 3 ಫೆಬ್ರುವರಿ 2021, 5:06 IST
ಜೆಫ್ ಬೆಜೋಸ್: ರಾಯಿಟರ್ಸ್ ಚಿತ್ರ
ಜೆಫ್ ಬೆಜೋಸ್: ರಾಯಿಟರ್ಸ್ ಚಿತ್ರ   

ನವದೆಹಲಿ: ಈ ವರ್ಷದ ಕೊನೆಯಲ್ಲಿ ಅಮೆಜಾನ್‌ನ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯನ್ನು ತ್ಯಜಿಸುವುದಾಗಿ ಜೆಫ್ ಬೆಜೋಸ್ ಮಂಗಳವಾರ ಹೇಳಿದ್ದಾರೆ. ಟೆಕ್ ಮತ್ತು ಇ-ಕಾಮರ್ಸ್ ದೈತ್ಯ ಸಂಸ್ಥೆ ಅಮೆಜಾನ್ ರಜಾ ಕಾಲದ ತ್ರೈಮಾಸಿಕದಲ್ಲಿ ಲಾಭ ಮತ್ತು ಆದಾಯದಲ್ಲಿ ಎರಡರಲ್ಲೂ ಏರಿಕೆ ಕಂಡ ಬೆನ್ನಲ್ಲೇ ಈ ಘೋಷಣೆ ಮಾಡಿದ್ದಾರೆ.

ಹಾಗಾಗಿ, ಸದ್ಯ ಅಮೆಜಾನ್ ವೆಬ್ ಸರ್ವೀಸಸ್ ಮುಖ್ಯಸ್ಥರಾಗಿರುವ ಆ್ಯಂಡಿ ಜಾಸ್ಸಿ ಮೂರನೇ ತ್ರೈಮಾಸಿಕದಲ್ಲಿ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕಂಪನಿ ತಿಳಿಸಿದೆ.

ರಜೆಕಾಲದ ತ್ರೈಮಾಸಿಕದಲ್ಲಿ ಕಂಪನಿಯ ಆದಾಯವು ದುಪ್ಪಟ್ಟು 7.2 ಬಿಲಿಯನ್ ಡಾಲರ್‌ ಹೆಚ್ಚಾಗಿದ್ದು, ಶೇ. 44 ರಷ್ಟು ಜಿಗಿದು 125.6 ಬಿಲಿಯನ್ ಡಾಲರ್‌ಗಳಿಗೆ ಏರಿಕೆಯಾಗಿದೆ ಎಂಬ ವರದಿಗಳ ಬೆನ್ನಲ್ಲೇ ಜೆಫ್ ಬೆಜೋಸ್ ನಿರ್ಗಮನದ ಹೇಳಿಕೆ ನೀಡಿದ್ದಾರೆ.

ADVERTISEMENT

ಸಿಇಒ ಹುದ್ದೆಯನ್ನು ಜಾಸ್ಸಿಗೆ ಹಸ್ತಾಂತರಿಸುವ ಮೂಲಕ ಮೂರನೇ ತ್ರೈಮಾಸಿಕದಲ್ಲಿ ಕಾರ್ಯನಿರ್ವಾಹಕ ಹುದ್ದೆಯಲ್ಲಿ ಪರಿವರ್ತನೆಯಾಗಲಿದೆ ಎಂದು ಜೆಫ್ ಬೆಜೋಸ್ ಹೇಳಿದ್ದಾರೆ.

"ಅಮೆಜಾನ್ ಇಂದು ಏನಾಗಿದೆಯೊ ಅದಕ್ಕೆ ಅದರ ಆವಿಷ್ಕಾರ ಕಾರಣ" ಎಂದು ಬೆಜೋಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಇದೀಗ ನಾನು ಅಮೆಜಾನ್‌ನಲ್ಲಿ ಅದರ ಸೃಜನಶೀಲತೆಯ ಉತ್ತುಂಗವನ್ನು ನೋಡುತ್ತಿದ್ದೇನೆ, ಪರಿವರ್ತನೆಗೆ ಇದು ಸೂಕ್ತ ಸಮಯವಾಗಿದೆ." ಎಂದಿದ್ದಾರೆ.

ಜೆಫ್ ಬೆಜೋಸ್ ಬಳಿಕ ಅಮೆಜಾನ್ ಸಿಇಒ ಹುದ್ದೆಗೇರಲಿರುವ ಆ್ಯಂಡಿ ಜಾಸ್ಸಿ, 1997ರಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಸಂಸ್ಥೆಗೆ ಸೇರ್ಪಡೆಗೊಂಡಿದ್ದರು. 2003ರಲ್ಲಿ ಕಂಪನಿಯ ಅತ್ಯಂತ ಲಾಭದಾಯಕ ವೆಬ್ ವಿಭಾಗ ಎಡಬ್ಲ್ಯೂಎಸ್(AWS) ಸ್ಥಾಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.