ADVERTISEMENT

ಶಿಯೋಮಿ ಕಂಪನಿ: ಬಿಡುಗಡೆಯಾಗಿದೆ ರೆಡ್‌ ಮಿ ನೋಟ್ ಪ್ರೋ 8

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 19:30 IST
Last Updated 23 ಅಕ್ಟೋಬರ್ 2019, 19:30 IST
Redmi note 8 pro
Redmi note 8 pro   

ಸದ್ಯ ಭಾರತದ ಮೊಬೈಲ್‌ ಫೋನ್‌ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಶಿಯೋಮಿ ಕಂಪನಿಯು ಈಚೆಗಷ್ಟೇ ರೆಡ್‌ಮಿ ನೋಟ್‌ 8 ಪ್ರೊ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೇ ಹೊಸ ವೈಶಿಷ್ಟ್ಯ ಅಳವಡಿಸಿಕೊಳ್ಳುತ್ತಾ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಇದು ರೆಡ್‌ಮಿ ನೋಟ್‌ 8ರ ಮುಂದಿನ ಆವೃತ್ತಿಯಾಗಿದ್ದು, ಗುಣಮಟ್ಟದ ಕ್ಯಾಮೆರಾ ಹೊಂದಿದೆ. ಪರದೆಯ ಗಾತ್ರ ದೊಡ್ಡದಾಗಿದ್ದು, ಬ್ಯಾಟರಿ ಸಾಮರ್ಥ್ಯವೂ ಹೆಚ್ಚಿಗೆ ಇದೆ.

ಭಾರತಕ್ಕೆ ಹಾನರ್‌ ಆಂಡ್ರಾಯ್ಡ್ ಫೋನ್‌

ಆಂಡ್ರಾಯ್ಡ್‌ ಆಧಾರಿತ ಸ್ಮಾ‌ರ್ಟ್‌ಫೋನ್‌ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿ ಚೀನಾದ ಹಾನರ್‌ ಬ್ರ್ಯಾಂಡ್ ಹೇಳಿದೆ.

ADVERTISEMENT

ಕಂಪನಿಯ ಮಾತೃ ಸಂಸ್ಥೆ ಹುವಾವೆಗೆ ಅಮೆರಿಕವು ನಿಷೇಧ ಹೇರಿದ್ದರೂ, ಮಾರುಕಟ್ಟೆ ವಿಸ್ತರಣೆ ಮತ್ತು ಹೊಸ ಹ್ಯಾಂಡ್‌ಸೆಟ್‌ ಬಿಡುಗಡೆ ಮಾಡುವುದನ್ನು ನಿಲ್ಲಿಸಿಲ್ಲ.

‘ಭಾರತದಲ್ಲಿ ಈ ವರ್ಷಾಂತ್ಯಕ್ಕೆ ಹಾನರ್‌ 9ಎಕ್ಸ್‌ ಬಿಡುಗಡೆ ಮಾಡಲಿದ್ದು, ಆಂಡ್ರಾಯ್ಡ್‌ ಒಎಸ್‌ನಿಂದ ಇದು ಕಾರ್ಯಾಚರಿಸಲಿದೆ’ ಎಂದು ಹಾನರ್‌ ಇಂಡಿಯಾದ ಅಧ್ಯಕ್ಷ ಚಾರ್ಲ್ಸ್‌ ಪೆಂಗ್‌ ತಿಳಿಸಿದ್ದಾರೆ.

ಅಮೆರಿಕದ ಕಂಪನಿಗಳಿಂದ ಸಾಫ್ಟ್‌ವೇರ್ ಮತ್ತು ಬಿಡಿಭಾಗಗಳನ್ನು ಪಡೆಯಲು ಹುವಾವೆಗೆ ನಿಷೇಧ ವಿಧಿಸಿರುವುದರಿಂದ ಹುವಾವೆ ಕಂಪನಿಯು ತನ್ನದೇ ಆದ ಹಾಮನಿಒಸ್‌ ಬಿಡುಗಡೆ ಮಾಡಿದೆ.

2020ರ ಮೊದಲ ತ್ರೈಮಾಸಿಕದಿಂದ ಭಾರತದಲ್ಲಿ ಹಾನರ್‌ ವಿಷನ್‌ ಸ್ಮಾರ್ಟ್ ಟಿವಿ ಮಾರಾಟ ಮಾಡಲು ಕಂಪನಿ ನಿರ್ಧರಿಸಿದೆ. ಈ ಟಿವಿಯನ್ನು ಆಂಡ್ರಾಯ್ಡ್ ಆಧರಿತ ಸ್ಮಾರ್ಟ್‌ಫೋನ್‌ನೊಂದಿಗೆ ಸಂಪರ್ಕಿಸಬಹುದಾಗಿದೆ.

ವಾಟ್ಸ್‌ಆ್ಯಪ್‌ ಫ್ಲ್ಯಾಷ್‌ ಸ್ಕ್ರೀನ್‌

ವಾಟ್ಸ್‌ಆ್ಯಪ್‌ನ ಬೇಟಾ ವರ್ಷನ್‌ 2.19.297ನಲ್ಲಿ ಲೈಟ್‌ ಫ್ಲ್ಯಾಷ್‌ ಸ್ಕ್ರೀನ್‌ ಆಯ್ಕೆ ನೀಡಲಾಗಿದೆ. ಆ್ಯಪ್‌ ಮೊದಲ ಬಾರಿಗೆ ಲೋಡ್‌ ಆಗುವಾಗ ವೈಟ್‌ ಬ್ಯಾಗ್ರೌಂಡ್‌ನಲ್ಲಿ ವಾಟ್ಸ್‌ಆ್ಯಪ್‌ ಲೋಗೊ ಇರುವ ಈ ಹೊಸ ಪೇಜ್‌ ಕಾಣಿಸುತ್ತದೆ. ಆ ಬಳಿಕ ಮೆಸೆಜಿಂಗ್‌ ಸೇರಿದಂತೆ ಇನ್ನಿತರೆ ಆಯ್ಕೆಗಳು ತೆರೆದುಕೊಳ್ಳಲಿವೆ.

ಇದೇ ರೀತಿ ಡಾರ್ಕ್‌ ಫ್ಲ್ಯಾಷ್‌ ಸ್ಕ್ರೀನ್‌ ಆಯ್ಕೆಯೂ ಶೀಘ್ರದಲ್ಲೇ ಲಭ್ಯವಾಗಲಿದೆ. ಈ ಆಯ್ಕೆಯ ಮೊದಲಿಗೆ ಐಒಎಸ್‌ನ ವಾಟ್ಸ್‌ಆ್ಯಪ್‌ನ ಬಿಸಿನೆಸ್‌ ಬೇಟಾ 2.19.110.21 ನಲ್ಲಿ ಕಾಣಿಸಿದ್ದು, ಇದೀಗ ಆಂಡ್ರಾಯ್ಡ್‌ನಲ್ಲಿಯೂ ಲಭ್ಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.