ADVERTISEMENT

ಗೂಗಲ್ ಪ್ಲೇ ಸ್ಟೋರ್‌ಗೆ ಮರಳಿ ಬಂತು ಪೇಟಿಎಂ ಆ್ಯಪ್

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 14:42 IST
Last Updated 18 ಸೆಪ್ಟೆಂಬರ್ 2020, 14:42 IST
ಪೇಟಿಎಂ
ಪೇಟಿಎಂ   

ನವದೆಹಲಿ:ಗೂಗಲ್ ಪ್ಲೇ ಸ್ಟೋರ್‌ಪೇಟಿಎಂ ಆ್ಯಪ್‌ನ್ನು ತೆಗೆದು ಹಾಕಿದ್ದರಿಂದ ಕೆಲವು ಗಂಟೆಗಳ ಕಾಲ ಅಲಭ್ಯವಾಗಿದ್ದಪೇಟಿಎಂ ಆ್ಯಪ್ ಈಗಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯ ಎಂದು ಕಂಪನಿ ಹೇಳಿದೆ.

ಪೇಟಿಎಂ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದ ಕೆಲವೇ ಕ್ಷಣದಲ್ಲಿ ಟ್ವೀಟಿಸಿದ ಪೇಟಿಎಂ ಶೀಘ್ರದಲ್ಲೇ ಗೂಗಲ್ ಪ್ಲೇ ಸ್ಟೋರ್‌ಗೆ ಮರಳುವುದಾಗಿ ಹೇಳಿತ್ತು. ಇದೀಗ ನಾವು ಅಪ್‌ಡೇಟ್ ಆಗಿ ಮರಳಿದ್ದೇವೆ ಎಂದು ಟ್ವೀಟಿಸಿದೆ.

ನಮ್ಮ ಅಂಡ್ರಾಯ್ಡ್ ಆ್ಯಪ್‌ನ್ನು ಪುನಸ್ಥಾಪಿಸುವುದಕ್ಕಾಗಿ ನಾವು ಗೂಗಲ್ ಜತೆ ಕೆಲಸ ಮುಂದುವರಿಸಿದ್ದೇವೆ.ನಿಮ್ಮ ಹಣ ಹಾಗೂ ಪೇಟಿಎಂ ಜತೆ ಲಿಂಕ್ ಆಗಿರುವ ಖಾತೆ ಶೇ.100 ರಷ್ಟು ಸುರಕ್ಷಿತವಾಗಿದೆ ಎಂದು ನಾವು ಭರವಸೆ ನೀಡುತ್ತೇವೆ. ನಮ್ಮ ಎಲ್ಲ ಸೇವೆಗಳು ಸಂಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿದ್ದು ಈ ಹಿಂದಿನಂತೆ ಪೇಟಿಎಂ ಬಳಕೆ ಮುಂದುವರಿಸಿ ಎಂದು ಕಂಪನಿ ಹೇಳಿದೆ .

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.