ನವದೆಹಲಿ: ಪೇಟಿಎಂ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ತೆಗೆದುಹಾಕಿದ ಬೆನ್ನಲ್ಲೇ ನಿಮ್ಮ ಹಣ ಸುರಕ್ಷಿತವಾಗಿದೆ ಎಂದು ಪೇಟಿಎಂ ಟ್ವೀಟ್ ಮಾಡಿದೆ.
ಪ್ರಿಯ ಪೇಟಿಎಂ ಬಳಕೆದಾರರೇ, ಪೇಟಿಎಂ ಅಂಡ್ರಾಯ್ಡ್ ಆ್ಯಪ್ ಸದ್ಯ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೊಸ ಅಪ್‌ಡೇಟ್ ಅಥವಾ ಡೌನ್‌ಲೋಡ್‌ಗಾಗಿ ಲಭ್ಯವಿರುವುದಿಲ್ಲ. ಶೀಘ್ರವೇ ಇದು ಮರಳಿ ಬರಲಿದೆ. ನಿಮ್ಮ ಹಣ ಸುರಕ್ಷಿವಾಗಿದ್ದು, ಎಂದಿನಂತೆ ನೀವು ಪೇಟಿಎಂ ಆ್ಯಪ್ ಬಳಸಬಹುದು ಎಂದು ಪೇಟಿಎಂ ಟ್ವೀಟಿಸಿದೆ.
ಪೇಟಿಎಂ ಆ್ಯಪ್ ಈಗ ಡೌನ್‌ಲೋಡ್‌ಗೆ ಲಭ್ಯವಿಲ್ಲ. ಆದರೆ ಈಗಾಗಲೇ ಆ್ಯಪ್ ಬಳಸುತ್ತಿರುವ ಬಳಕೆದಾರರರಿಗೆ ಇದರಿಂದ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಪಿಟಿಐ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.