ಗಾಂಜಾ ಸಾಗಣೆ ಆರೋಪಿಗಳಿಗೆ ಸಾರ್ವಜನಿಕವಾಗಿ ಥಳಿಸಿದ ಪೊಲೀಸರು
ಬೆಂಗಳೂರು: ಡ್ರಗ್ಸ್ ಸಾಗಣೆ ಆರೋಪಿಗಳನ್ನು ಪೊಲೀಸರು ಸಾರ್ವಜನಿಕವಾಗಿ ಥಳಿಸಿರುವ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ನಡೆದಿದೆ.
ಮೇ 26ರಂದು ಈ ಘಟನೆ ನಡೆದಿದ್ದು ವಿಡಿಯೊ ಹರಿದಾಡುತ್ತಿದೆ.
ತೆನಾಲಿ ಮಂಗಳಗಿರಿಯಲ್ಲಿ ಮೂವರು ಯುವಕರು ಗಾಂಜಾ ಸಾಗಿಸುತ್ತಿದ್ದಾರೆ ಎಂಬ ಆರೋಪದ ಮೇಲೆ ಕಾನ್‌ಸ್ಟೆಬಲ್ ಒಬ್ಬರು ಅವರ ಬಂಧನಕ್ಕೆ ತೆರಳಿದ್ದರು. ಆದರೆ, ಆರೋಪಿಗಳು ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು ಎಂದು ಆರೋಪಿಸಲಾಗಿದೆ.
ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಕಾನ್‌ಸ್ಟೆಬಲ್ ಮೇಲೆ ಹಲ್ಲೆ ಮಾಡಿದ್ದ ಸ್ಥಳಕ್ಕೆ ಕರೆದುಕೊಂಡು ಬಂದು ಕಾಲಿಗೆ ಹಗ್ಗ ಕಟ್ಟಿ ಲಾಠಿಯಿಂದ ಥಳಿಸಲಾಗಿದೆ. ಇನ್‌ಸ್ಟೆಪಕ್ಟರ್ ಚಿರಂಜೀವಿ ಎನ್ನುವರು ಹಾಗೂ ಸಿಬ್ಬಂದಿ ಯುವಕರಿಗೆ ಥಳಿಸಿದ್ದಾರೆ.
ಸಾರ್ವಜನಿಕವಾಗಿ ಹಲ್ಲೆ ಮಾಡಿರುವ ಪೊಲೀಸರ ವರ್ತನೆಗೆ ವಿರೋಧವು ಕೇಳಿ ಬಂದಿದೆ. ವೈಎಸ್‌ಆರ್‌ಪಿ ಕಾಂಗ್ರೆಸ್ ನಾಯಕ ಅಂಬಟ್ಟಿ ರಾಂಬಾಬು ಅವರು ವಿಡಿಯೊ ಹಂಚಿಕೊಂಡು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.