ಮುಂಬೈ:ಅಕಾಲಿಕ ಮಳೆಯಿಂದಾಗಿದೇಶದಾದ್ಯಂತ ಈರುಳ್ಳಿ ಬೆಲೆಯು ₹100ರ ಗಡಿಯನ್ನು ದಾಟಿದೆ.ಮುಂಬೈನ ರೆಸ್ಟೋರೆಂಟ್‌ನ ಹೊರಗಡೆಕಾವಲಿಲ್ಲದೆಇರಿಸಿದ್ದ ಈರುಳ್ಳಿಯಫೋಟೊಸಾಮಾಜಿಕ ಜಾಲತಾಣಗಳಲ್ಲಿವೈರಲ್ಆಗಿದೆ.
ಮುಂಬೈನ ಪ್ರಸಿದ್ಧಬ್ಲಾಗರ್ಗೋಪಾಲ್ಎಂ.ಎಸ್ ಎನ್ನುವವರು ತನ್ನ ಬ್ಲಾಗ್‌ನಲ್ಲಿ ಈ ಪೋಟೊವನ್ನು ಅಪ್‌ಡೇಟ್ ಮಾಡಿದ್ದಾರೆ. ಸಾಮಾನ್ಯವಾಗಿ ನಗರದ ದಿನನಿತ್ಯದ ಆಗುಹೋಗುಗಳನ್ನು ಬ್ಲಾಗಿಂಗ್ ಮಾಡುತ್ತಾರೆ.
ದೇಶದ ಇತರೆ ಭಾಗಗಳಲ್ಲಿ ಈರುಳ್ಳಿ ಕಳವು ಮಾಡಲಾಗಿದೆ ಎಂಬ ವರದಿಗಳ ಹೊರತಾಗಿಯೂ ಈ ಹೋಟೆಲ್‌ನ ಹೊರಗಡೆ ಇರಿಸಿದ್ದ ಈರುಳ್ಳಿ ವಿಶೇಷವಾಗಿ ಕಂಡಿತು.ಸೆವ್ರಿರೈಲುನಿಲ್ದಾಣದ ಸಮೀಪಮುಚ್ಚಿದ ರೆಸ್ಟೋರೆಂಟ್‌ನ ಹೊರಗಡೆ ಈರುಳ್ಳಿಯನ್ನುಇರಿಸಲಾಗಿತ್ತು. ತನ್ನಬ್ಲಾಗ್(ಮುಂಬೈಪೌಸೆಡ್)ನಲ್ಲಿಪೋಟೊವನ್ನು ‘ಎಷ್ಟು ಸುರಕ್ಷಿತವಾಗಿದೆ ನಮ್ಮಮುಂಬೈ’ಎಂಬ ತಲೆಬರಹದಲ್ಲಿ ಪೋಸ್ಟ್ ಮಾಡಿದ್ದರು.
ಹೆಚ್ಚುತ್ತಿರುವ ಈರುಳ್ಳಿ ಬೆಲೆಯ ಬಗ್ಗೆ ಸಾಮಾಜಿಕಜಾಲತಾಣಗಳಲ್ಲಿಜೋಕ್ಸ್‌ಗಳು ಮತ್ತು ಮೀಮ್‌ಗಳು ವೈರಲ್‌ಅಗಿವೆ. ಈ ಹೋಟೆಲ್‌ನ ಬಗ್ಗೆ ಸಾಕಷ್ಟು ಜೋಕ್ಸ್‌ಗಳುಹರಿದಾಡುತ್ತಿವೆ. ಈರುಳ್ಳಿ ಮತ್ತು ಕಾಗೆಗಳು ಸುರಕ್ಷಿತವಾಗಿವೆ ಆದರೆಮಹಿಳೆಯರು ಸುರಕ್ಷಿತವಾಗಿಲ್ಲ ಎಂದುಹೈದರಾಬಾದ್ಅತ್ಯಾಚಾರಮತ್ತು ಕೊಲೆಯ ಬಗ್ಗೆ ಜನರು ಬರೆದಿದ್ದಾರೆ.
ಕೆಲವು ಹೋಟೆಲ್‌ಗಳು ಈರುಳ್ಳಿಗಳ ಉಪಯೋಗವನ್ನು ಕಡಿಮೆಗೊಳಿಸಿದೆ.ಬೆಂಗಳೂರಿನಲ್ಲಿ ಕೆಲವು ಹೋಟೆಲ್‌ಗಳು ಈರುಳ್ಳಿ ದೋಸೆಯನ್ನು ತಮ್ಮಮೆನುವಿನಿಂದತೆಗೆದುಹಾಕಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.