35ರ ಯುವಕನನ್ನು ಮದುವೆಯಾದ 60ರ ಮಹಿಳೆ
ಚಿತ್ರ: ಎಕ್ಸ್
ಪಟ್ನಾ: ಪ್ರೀತಿಗೆ ವಯಸ್ಸಿನ ಮಿತಿಯಿಲ್ಲ. ಪ್ರೀತಿ ಕುರುಡು ಎಂದೆಲ್ಲಾ ಹೇಳುವುದನ್ನು ಕೇಳಿರುತ್ತೇವೆ. ಅದಕ್ಕೆ ಉದಾಹರಣೆ ಎಂಬಂತ ಘಟನೆ ಬಿಹಾರದಲ್ಲಿ ನಡೆದಿದೆ.
35 ವರ್ಷದ ವ್ಯಕ್ತಿಗಾಗಿ 60ರ ಮಹಿಳೆಯೊಬ್ಬರು ಪತಿ ಮತ್ತು ಮಕ್ಕಳನ್ನು ತೊರೆದು ಬಂದಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ.
ರಾಂಗ್ ನಂಬರ್‌ನಿಂದ ಹುಟ್ಟಿದ ಪ್ರೇಮ
ವರದಿಗಳ ಪ್ರಕಾರ, ಸುಮಾರು ನಾಲ್ಕು ತಿಂಗಳ ಹಿಂದೆ ಮಹಿಳೆಗೆ ರಾಂಗ್ ನಂಬರ್‌ನಿಂದ ಕರೆ ಬಂದಿತ್ತು. ಅದು 35ರ ವ್ಯಕ್ತಿ ವಕಿಲ್ ಮಿಶ್ರಾ ಅವರದ್ದಾಗಿದ್ದು. ದಿನಕಳೆದಂತೆ ಮಾತುಕತೆ ಮುಂದುವರಿದಿತ್ತು. ಅವರಿಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. ಕೊನೆಗೆ ಒಂದು ದಿನ ಇಬ್ಬರೂ ಭಾಗಲ್ಪುರ ರೈಲು ನಿಲ್ದಾಣದಲ್ಲಿ ಭೇಟಿಯಾಗಿ ಅಲ್ಲಿಂದ ಲುಧಿಯಾನಕ್ಕೆ ತೆರಳಿ ಮದುವೆಯನ್ನೂ ಆಗಿದ್ದರು.
ಬಂಕಾ ಜಿಲ್ಲೆಯ ಅಮರ್‌ಪುರ ಬಸ್ ನಿಲ್ದಾಣಕ್ಕೆ ಈ ಜೋಡಿ ಬಂದಿದ್ದಾಗ ಆಕೆಯ ಪತಿ ಮತ್ತು ಮಗ ನೋಡಿ ತಕರಾರು ಎತ್ತಿದ್ದಾರೆ. ಈ ವೇಳೆ ದೊಡ್ಡ ಜಗಳವೇ ನಡೆದಿದೆ. ಅಕ್ಕಪಕ್ಕದ ಜನರು ಗುಂಪಾಗಿ ಬಂದು ನೋಡುತ್ತಿದ್ದುದನ್ನು ಕಂಡ ಪೊಲೀಸರು ಸ್ಥಳಕ್ಕೆ ಬಂದು ವಿಚಾರಿಸಿದಾಗ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ.
ಈ ಬಗ್ಗೆ ಪೊಲೀಸರು ವಿಚಾರಿಸಿದಾಗ ಮಹಿಳೆ ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ಎಂದಿದ್ದಾರೆ. ಎರಡು ಕಡೆಯವರ ಹೇಳಿಕೆ ಪಡೆದ ಪೊಲೀಸರು ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.