ADVERTISEMENT

ಒಳಚರಂಡಿಗೆ ಇಳಿದ ಬಿಲ್‌ ಗೇಟ್ಸ್‌: ತ್ಯಾಜ್ಯ ನೀರಿನ ಸಂಸ್ಕರಣೆ ಬಗ್ಗೆ ಸಂಶೋಧನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ನವೆಂಬರ್ 2023, 4:57 IST
Last Updated 21 ನವೆಂಬರ್ 2023, 4:57 IST
<div class="paragraphs"><p>ಒಳಚರಂಡಿಗೆ ಇಳಿದ ಬಿಲ್‌ ಗೇಟ್ಸ್‌</p></div>

ಒಳಚರಂಡಿಗೆ ಇಳಿದ ಬಿಲ್‌ ಗೇಟ್ಸ್‌

   

(insta/thisisbillgates)

ಬ್ರಸೆಲ್ಸ್‌: ವಿಶ್ವ ಶೌಚಾಲಯ ದಿನದ ಸಂದರ್ಭದಲ್ಲಿ ಬೆಲ್ಜಿಯಂನ ಬ್ರಸೆಲ್ಸ್‌ಗೆ ಭೇಟಿ ನೀಡಿದ ಮೈಕ್ರೊಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್, ಅಲ್ಲಿನ ಒಳಚರಂಡಿಗೆ ಇಳಿದು ತ್ಯಾಜ್ಯ ನೀರಿನ ಸಂಸ್ಕರಣೆಯ ಕುರಿತಂತೆ ಹಲವು ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಈ ಬಗ್ಗೆ ವಿಡಿಯೊವನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

‘ಈ ವರ್ಷ ವಿಶ್ವ ಶೌಚಾಲಯ ದಿನದ ಪ್ರಯುಕ್ತ ಬ್ರಸೆಲ್ಸ್‌ನ ಒಳಚರಂಡಿಗೆ ಇಳಿದು ಒಳಚರಂಡಿ ವ್ಯವಸ್ಥೆಯ ಗುಪ್ತ ಇತಿಹಾಸವನ್ನು ಪರಿಶೋಧಿಸಲು ಪ್ರಯತ್ನಿಸಿದೆ. ಜಾಗತಿಕ ಆರೋಗ್ಯದಲ್ಲಿ ತ್ಯಾಜ್ಯನೀರಿನ ನಿರ್ವಹಣೆಯ ಪಾತ್ರವನ್ನು ಅನ್ವೇಷಿಸಿದೆ’ ಎಂದು ಬಿಲ್‌ ಗೇಟ್ಸ್‌ ಬರೆದುಕೊಂಡಿದ್ದಾರೆ.

‘ಬ್ರಸೆಲ್ಸ್‌ನ ಒಳಚರಂಡಿ ವ್ಯವಸ್ಥೆಯ ಕುರಿತಂತೆ ಅನೇಕ ವಿಷಯಗಳನ್ನು ತಿಳಿದುಕೊಂಡೆ. ನಗರದ ತ್ಯಾಜ್ಯ ನೀರಿನ ಸಂಸ್ಕರಣೆ ಇತಿಹಾಸದ ಬಗ್ಗೆಯೂ ತಿಳಿದುಕೊಂಡೆ. 18ನೇ ಶತಮಾನದಲ್ಲಿ ಚರಂಡಿ ನೀರನ್ನು ನೇರವಾಗಿ ಸೆನ್ನೆ ನದಿಗೆ ಹರಿಸಲಾಗಿತ್ತು. ಇದು ಕಾಲರಾದಂತಹ ಭೀಕರ ಸಾಂಕ್ರಮಿಕ ರೋಗ ಹರಡಲು ಕಾರಣವಾಗಿತ್ತಂತೆ. ಇಂದು ಒಳಚರಂಡಿ ಮತ್ತು ಸಂಸ್ಕರಣಾ ಘಟಕಗಳು ನಗರದ ತ್ಯಾಜ್ಯ ನೀರನ್ನು ಸಂಸ್ಕರಿಸುತ್ತಿವೆ’ ಎಂದು ವಿಡಿಯೊದಲ್ಲಿ ಹೇಳಿದ್ದಾರೆ.

ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ನವೆಂಬರ್‌ 19ರಂದು ವಿಶ್ವ ಶೌಚಾಲಯ ದಿನ ಆಚರಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.