ADVERTISEMENT

ವಿಡಿಯೊ ನೋಡಿ: ಬಿಸ್ಕಿಟ್‌ಗಾಗಿ ಮಗು ಮಾಡಿದ್ದು ಏನು?

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2021, 10:38 IST
Last Updated 4 ಆಗಸ್ಟ್ 2021, 10:38 IST
ಮಗು
ಮಗು   

ಮಕ್ಕಳ ತುಂಟತನ, ಮುಗ್ದತೆ ಎಂತಹವರಿಗೂ ಇಷ್ಟವಾಗುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ವಿಡಿಯೊಗಳಂತೂ ಸಾಕಷ್ಟು ಲೈಕ್‌ಗಳನ್ನು ಪಡೆದುಕೊಳ್ಳುತ್ತಿರುತ್ತವೆ.

ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಮಗುವಿನ ವಿಡಿಯೊ ವೈರಲ್‌ ಆಗಿದೆ. ಮಗುವೊಂದು ಯಾರಿಗೂ ಗೊತ್ತಿಲ್ಲದ ಹಾಗೇ ಅಡುಗೆ ಮನೆಗೆ ಹೋಗಿ ಬಿಸ್ಕತ್‌ ಪಾಕೇಟ್‌ ತರುತ್ತದೆ. ಈ ವಿಡಿಯೊವನ್ನು ಆ ಮಗುವಿನ ತಂದೆ ಸೆರೆ ಹಿಡಿದಿದ್ದಾರೆ.

ಬಿಸ್ಕತ್ ಪಾಕೇಟ್‌ ಹಿಡಿದುಕೊಂಡು ಬರುವಾಗ ತಂದೆಯನ್ನು ನೋಡಿ ಅವಕ್ಕಾಗಿ ನಗು ಬೀರುವ ಮುಗ್ದತೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.ಸ್ನಾಕ್‌ಬಂಡಿಟ್‌ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ವಿಡಿಯೊವನ್ನು ಪ್ರಕಟಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.