ನಡುರಸ್ತೆಯಲ್ಲಿ ಹಿರಿಯ ನಾಗರಿಕನನ್ನು ರಾಡ್‌ನಿಂದ ರಕ್ತ ಬರುವಂತೆ ಥಳಿಸಿದ ಯುವಕ!
ಬೆಂಗಳೂರು: ಯುವಕನೊಬ್ಬ ತನ್ನ ಸಹಚರರೊಡನೆ ಹಾಡಹಗಲೇ ನಡುರಸ್ತೆಯಲ್ಲಿ ಹಿರಿಯ ನಾಗರಿಕರೊಬ್ಬರನ್ನು ರಾಡ್ ಮತ್ತು ದೊಣ್ಣೆಯಿಂದ ಮನಸೋಇಚ್ಚೆ ಥಳಿಸಿರುವ ಘಟನೆ ದೆಹಲಿಯ ಈಶಾನ್ಯ ಭಾಗವಾದ ಅಲಿಗಂಜ್‌ನಲ್ಲಿ ನಡೆದಿದೆ.
ಹಿರಿಯ ನಾಗರಿಕರೊಬ್ಬರನ್ನು ರಾಡ್ ಮತ್ತು ದೊಣ್ಣೆಯಿಂದ ಮನಸೋಇಚ್ಚೆ ಥಳಿಸುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರಘುರಾಜ್ ಸಿಂಗ್ ಎನ್ನುವರೇ ಥಳಿತಕ್ಕೊಳಗಾದ ವ್ಯಕ್ತಿ. ಥಳಿಸಿದವನು ಮೋಹಿತ್ ಎನ್ನುವ ಯುವಕ.
ರಘುರಾಜ್ ಸಿಂಗ್ ಕಾರಿನಲ್ಲಿ ಕಚೇರಿಗೆ ತೆರಳುತ್ತಿದ್ದಾಗ ಮೋಹಿತ್ ಹಾಗೂ ಆತನ ಸಹಚರರು ರಘುರಾಜ್ ಅವರನ್ನು ಕಾರಿನಿಂದ ಎಳೆದು ರಸ್ತೆಯಲ್ಲಿ ದೊಣ್ಣೆ, ರಾಡ್‌ನಿಂದ ಥಳಿಸಿದ್ದಾರೆ.
ಮೋಹಿತ್ ಎರಡು ವರ್ಷದ ಹಿಂದೆ ದೆಹಲಿ ಅಭಿವೃದ್ಧಿ ಪ್ರಾಧಿಕಾರದಿಂದ ಫ್ಲಾಟ್ ಒಂದನ್ನು ಖರೀದಿಸಿದ್ದರು. ಖರೀದಿಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಡಿಡಿಎ, ಮೋಹಿತ್ ಅವರ ಫ್ಲಾಟ್ ಅನ್ನು ತೆರವು ಮಾಡಿಸಿತ್ತು. ತೆರವು ಮಾಡಿಸಲು ರಘುರಾಜ್ ಸಿಂಗ್ ದೂರು ನೀಡಿದ್ದರು ಎಂದು ಆರೋಪಿಸಿ ಮೋಹಿತ್ ಹಲ್ಲೆ ಮಾಡಿದ್ದಾನೆ ಎಂದು ಎನ್‌ಡಿಟಿವಿ ಇಂಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಈ ಕುರಿತು ಅಲಿಗಂಜ್ ಪೊಲೀಸರು ಮೋಹಿತ್ ವಿರುದ್ಧ ಕೊಲೆ ಯತ್ನ, ಬೆದರಿಕೆ ಪ್ರಕರಣ ದಾಖಲಿಸಿಕೊಂಡು ಮೋಹಿತ್ ಹಾಗೂ ಆತನ ಸಹಚರರ ಪತ್ತೆಗೆ ಬಲೆ ಬೀಸಿದೆ.
ಗಂಭೀರವಾಗಿ ಗಾಯಗೊಂಡಿರುವ ರಘುರಾಜ್ ಸಿಂಗ್ ಆಸ್ಪತ್ರೆ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.