ADVERTISEMENT

ಮೆಟ್ರೊ ರೈಲಿನಲ್ಲಿ ಯುವಕ–ಯುವತಿಯ ಆಕ್ಷೇಪಾರ್ಹ ನಡವಳಿಕೆ: ವ್ಯಾಪಕ ವಿರೋಧ

ದೆಹಲಿ ಮೆಟ್ರೊ ರೈಲಿನಲ್ಲಿ ನಡೆದಿದೆ ಎನ್ನಲಾದ ಘಟನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 11 ಅಕ್ಟೋಬರ್ 2023, 10:57 IST
Last Updated 11 ಅಕ್ಟೋಬರ್ 2023, 10:57 IST
<div class="paragraphs"><p>ಆಕ್ಷೇಪಾರ್ಹ ನಡವಳಿಕೆ</p></div>

ಆಕ್ಷೇಪಾರ್ಹ ನಡವಳಿಕೆ

   

Xಚಿತ್ರ

ಬೆಂಗಳೂರು: ರಾಷ್ಟ್ರ ರಾಜಧಾನಿಯ ‘ದೆಹಲಿ ಮೆಟ್ರೊ’, ಕೆಲ ಪ್ರಯಾಣಿಕರ ಅತಿರೇಕದ ವರ್ತನೆಗಳಿಂದ ಆಗಾಗ ಹೆಚ್ಚು ಸುದ್ದಿಯಲ್ಲಿರುತ್ತದೆ.

ADVERTISEMENT

ಇದೀಗ ಇಂತಹದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಯುವಕ–ಯುವತಿಯರಿಬ್ಬರು ದೆಹಲಿ ಮೆಟ್ರೊ ರೈಲಿನಲ್ಲಿ ಆಕ್ಷೇಪಾರ್ಹವಾಗಿ ನಡೆದುಕೊಂಡಿರುವ ವಿಡಿಯೊ, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ರೈಲಿನಲ್ಲಿ ಯುವಕ–ಯುವತಿಯರಿಬ್ಬರು ಕೋಕ್ ಅನ್ನು ಬಾಯಿಯಿಂದ ಬಾಯಿಗೆ ಬದಲಾಯಿಸಿಕೊಂಡಿದ್ದಾರೆ. ಈ ವಿಡಿಯೊ X ನಲ್ಲಿ ಭಾರಿ ಸದ್ದು ಮಾಡಿದ್ದು ದೆಹಲಿ ಜನ ಅಲ್ಲದೇ ಅನೇಕ ನೆಟ್ಟಿಗರಿಂದ ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ದೆಹಲಿ ಮೆಟ್ರೊದಲ್ಲಿ ಏನಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ, ದೆಹಲಿ ಮೆಟ್ರೊವನ್ನು ನಿಲ್ಲಿಸುವುದು ಸೂಕ್ತವೇ? ಅಥವಾ ಮನರಂಜನೆಗೆ ಇದೊಂದು ಉತ್ತಮ ಸ್ಥಳವೇ? ಎಂದು ವಿಡಿಯೊ ಹಂಚಿಕೊಂಡು ಪೋಸ್ಟ್ ಮಾಡಿದ್ದಾರೆ.

ಫೇಸ್‌ಬುಕ್ ಹಾಗೂ ಶಾರ್ಟ್‌ ವಿಡಿಯೊಗಳ ಮೂಲಕ ತ್ವರಿತ ಜನಪ್ರಿಯತೆ ಗಳಿಸಲು ಕೆಲವರು ಇಂತಹ ಗೀಳಿಗೆ ಒಳಗಾಗಿದ್ದಾರೆ. ಇದೊಂದು ವ್ಯವಸವಾಗಿ ಮಾರ್ಪಡುತ್ತಿದೆ ಎಂದು ಹೇಳಿದ್ದಾರೆ.

ಈ ಬಗ್ಗೆ DMRCL ‍ಪ್ರತಿಕ್ರಿಯಿಸಿದ್ದು, ಆಕ್ಷೇಪಾರ್ಹ ನಡವಳಿಕೆಗಳನ್ನು ಸಾರ್ವಜನಿಕ ಸ್ಥಳದಲ್ಲಿ ನಿಷೇಧಿಸಿರುವಂತೆ ಮೆಟ್ರೊ ರೈಲಿನಲ್ಲೂ ನಿಷೇಧಿಸಲಾಗಿದೆ. ಈ ರೀತಿಯ ವರ್ತನೆಗಳು ಕಂಡು ಬಂದರೆ ಸಹ ಪ್ರಯಾಣಿಕರು ನಮಗೆ ವರದಿ ಮಾಡಿ ಎಂದು ಮನವಿ ಮಾಡಿಕೊಂಡಿದೆ.

ಇತ್ತೀಚೆಗೆ ಯುವತಿಯೊಬ್ಬರು ಜವಾನ್ ಸಿನಿಮಾದಲ್ಲಿನ ಶಾರುಕ್ ರೀತಿ ವೇಷ ಹಾಕಿಕೊಂಡು ದೆಹಲಿ ಮೆಟ್ರೊ ರೈಲಿನಲ್ಲಿ ನೃತ್ಯ ಮಾಡಿದ್ದರು. ಬೆಂಗಳೂರು ಮೆಟ್ರೊದಲ್ಲಿಯೂ ವಿದೇಶದ ಯೂಟ್ಯೂಬರ್ ಒಬ್ಬ ಇತ್ತೀಚಿಗೆ ಟಿಕೆಟ್ ಪರಿಶೀಲಿಸುವ ಕೌಂಟರ್ ಹಾರಿ ಹೋಗಿ ಅತಿರೇಕದ ವರ್ತನೆ ತೋರಿದ್ದ. ಅಲ್ಲದೇ ಅನೇಕ ಯುವಕ–ಯುವತಿಯರು ರೀಲ್ಸ್ ಹುಚ್ಚಿಗಾಗಿ ಮೆಟ್ರೊ ರೈಲುಗಳಲ್ಲಿ ಅತಿರೇಕದ ವರ್ತನೆಗಳನ್ನು ತೋರುತ್ತಿರುವ ಪ್ರಕರಣಗಳು ಇತ್ತೀಚಿಗೆ ಹೆಚ್ಚುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.