ADVERTISEMENT

ಭವಿಷ್ಯದಲ್ಲಿ ಬಡತನ ಇರುವುದೇ ಇಲ್ಲ, ಉಳಿತಾಯ ಏಕೆ? ಮತ್ತೊಂದು ಹುಳ ಬಿಟ್ಟ ಮಸ್ಕ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2025, 14:59 IST
Last Updated 18 ಡಿಸೆಂಬರ್ 2025, 14:59 IST
<div class="paragraphs"><p>ಇಲಾನ್ ಮಸ್ಕ್</p></div>

ಇಲಾನ್ ಮಸ್ಕ್

   

ಬೆಂಗಳೂರು: ಅಮೆರಿಕದ ಉದ್ಯಮಿ ಇಲಾನ್ ಮಸ್ಕ್ ಅವರು ಜಾಗತಿಕ ಆಗು ಹೋಗುಗಳ ಬಗ್ಗೆ ಅಚ್ಚರಿ ಎನ್ನುವಂತೆ ಹೇಳಿಕೆಗಳನ್ನು ನೀಡಿ ಆಗಾಗ ಗಮನ ಸೆಳೆಯುತ್ತಾರೆ.

ಇದೀಗ ಮತ್ತೆ ಇಂತಹದ್ದೇ ಹೇಳಿಕೆ ಕೊಟ್ಟಿದ್ದಾರೆ.

ADVERTISEMENT

ಅಮೆರಿಕದ ಖ್ಯಾತ ಹೂಡಿಕೆದಾರ ರೇ ಡಾಲಿಯೊ ಅವರು ಎಕ್ಸ್‌ನಲ್ಲಿ ಟ್ರಂಪ್ ಅಕೌಂಟ್ಸ್‌ ಎಂಬ ಹೂಡಿಕೆ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಬರೆದು, ಆರ್ಥಿಕ ಶಿಸ್ತು, ಉಳಿತಾಯದ ಬಗ್ಗೆ ಪಾಠ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಇಲಾನ್ ರೇ ಅವರ ಯೋಜನೆಗಳಿಗೆ ತಣ್ಣೀರು ಎರಚುವಂತೆ ಮಾತನಾಡಿದ್ದಾರೆ.

ರೇ ಡಾಲಿಯೊ ಅವರೇ ನಿಮ್ಮ ವಿಚಾರಗಳು ತುಂಬಾ ಚೆನ್ನಾಗಿವೆ. ಆದರೆ, ಭವಿಷ್ಯದಲ್ಲಿ ಬಡತನ ಇರುವುದಿಲ್ಲ. ಹಾಗಾಗಿ, ಉಳಿತಾಯ, ಹೂಡಿಕೆ ಮಾಡುವ ಯಾವುದೇ ಪ್ರಮೇಯಗಳು ಬರುವುದೇ ಇಲ್ಲ. ಏಕೆಂದರೆ ಆಗ ಎಲ್ಲರಲ್ಲೂ ಹೆಚ್ಚು ಆದಾಯ ಇರಲಿದೆ ಎಂದು ಹೇಳಿದ್ದಾರೆ. ಹಿಂದೆಯೂ ಎಐನಿಂದ ಭವಿಷದ್ಯದಲ್ಲಿ ಏನೆಲ್ಲಾ ಬದಲಾವಣೆ ಆಗಲಿದೆ ಎಂಬುದರ ಬಗ್ಗೆ ಮಸ್ಕ್ ಹೀಗೆ ಹೇಳಿದ್ದರು

ಕೆಲಸ ಎಂಬುದು ಆಗಲಿದೆ ಆಯ್ಕೆ!

‘ಮುಂದಿನ 20 ವರ್ಷಗಳಲ್ಲಿ ಕೆಲಸ ಎಂಬುದು ಆಯ್ಕೆಯಾಗಲಿದೆಯೇ ಹೊರತು, ಅದು ಅನಿವಾರ್ಯವಲ್ಲ. ಏಕೆಂದರೆ ಕೃತಕ ಬುದ್ಧಿಮತ್ತೆ ಮತ್ತು ರೊಬೊಟಿಕ್ಸ್‌ನಿಂದ ಉತ್ಪಾದಕತೆ ಹೆಚ್ಚಲಿದೆ. ಅದು ಎಷ್ಟರ ಮಟ್ಟಿಗೆ ಎಂದರೆ ಕೆಲಸ ಮಾಡುವುದು ಅನಿವಾರ್ಯವಲ್ಲ ಎಂಬಷ್ಟರ ಮಟ್ಟಿಗೆ’ ಎಂದು ಇಲಾನ್ ಹೇಳಿದ್ದಾರೆ.

‘ಎಐನಿಂದ ಹಣದ ಮೌಲ್ಯವೂ ಶೂನ್ಯವಾಗಲಿದೆ. ಆಗ ‘ಶಕ್ತಿ’ (ಇಂಧನ) ಎಂಬುದೇ ನಿಜವಾದ ಕರೆನ್ಸಿ ಆಗಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ.

ಇಲಾನ್ ಅವರ ಮೂರು ಕಂಪನಿಗಳ ಭವಿಷ್ಯವೇನು ಎಂಬ ನಿಖಿಲ್ ಪ್ರಶ್ನೆಗೆ ಉತ್ತರಿಸಿದ ಇಲಾನ್, ‘ಮುಂದಿನ ಕೆಲವೇ ವರ್ಷಗಳಲ್ಲಿ ಎಕ್ಸ್, ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ ಒಂದು ಉದ್ದೇಶಗಳಿಗೆ ಕೆಲಸ ಮಾಡಲಿವೆ. ಸೌರ ಇಂಧನ ಚಾಲಿತ ಉಪಗ್ರಹಗಳು ಬಾಹ್ಯಾಕಾಶದ ಆಳದಲ್ಲಿ ಕೆಲಸ ಮಾಡಲಿವೆ. ಇದಕ್ಕೆ ಸ್ಪೇಸ್‌ ಎಕ್ಸ್‌ ರಾಕೆಟ್‌ ಸಿದ್ಧಪಡಿಸಿದರೆ, ಟೆಸ್ಲಾ ಬ್ಯಾಟರಿ ನೀಡಲಿದೆ ಹಾಗೂ ಎಕ್ಸ್ ಬುದ್ಧಿಮತ್ತೆ ತುಂಬಲಿದೆ’ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.