ADVERTISEMENT

ಒಂದು ಬರ್ಗರ್‌ ಬೆಲೆ ₹17 ಸಾವಿರ: ಎಲ್ಲಿ ಸಿಗುತ್ತದೆ ಗೊತ್ತಾ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 9 ಫೆಬ್ರುವರಿ 2026, 7:24 IST
Last Updated 9 ಫೆಬ್ರುವರಿ 2026, 7:24 IST
   

ಯುವ ಪೀಳಿಗೆಯ ಬಹುತೇಕರಿಗೆ ಬರ್ಗರ್‌ ಎಂದಾಕ್ಷಣ ಬಾಯಲ್ಲಿ ನೀರೂರುತ್ತದೆ. ಮಾರುಕಟ್ಟೆಯಲ್ಲಿ ವಿವಿಧ ಬಗೆಯ ಬರ್ಗರ್‌ಗಳು ಲಭ್ಯವಿದ್ದು, ಹತ್ತಾರು ಆಫರ್‌ಗಳೂ ಇವೆ. ಜತೆಗೆ ಇದರಲ್ಲಿ ಸಸ್ಯಹಾರಿ ಹಾಗೂ ಮಾಂಸಹಾರಿ ಬರ್ಗರ್‌ಗಳು ಲಭ್ಯವಿವೆ. ನೀವು ಎಂದಾದರೂ ₹16,298 ಬೆಲೆಯ ಬರ್ಗರ್‌ ಅನ್ನು ನೊಡಿದ್ದೀರಾ. ಈ ದುಬಾರಿ ಬರ್ಗರ್‌ನ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಕ್ಯಾಲಿಫೋರ್ನಿಯಾದ ಲೆವಿಸ್ ಕ್ರೀಡಾಂಗಣದಲ್ಲಿ ಈ ಅದ್ಭುತ ‘ಸೂಪರ್ ಬೌಲ್ ಬರ್ಗರ್‌’ ಅನ್ನು ಪರಿಚಯಿಸಲಾಗಿದೆ. ಬರ್ಗರ್‌ನ ವಿಶೇಷತೆಗಳನ್ನು ಕಂಡ ಜನರು ಅಚ್ಚರಿ ಪಟ್ಟಿದ್ದಾರೆ. ಈ ಸೂಪರ್ ಬೌಲ್ ಬರ್ಗರ್‌ 1.5 ಕೆಜಿ ತೂಕವಿದೆ. ಒಂದು ಬರ್ಗರ್‌ಅನ್ನು 4 ಮಂದಿ ತಿನ್ನಬಹುದು.

‌ಈ ದುಬಾರಿ ಬರ್ಗರ್‌ ಅನ್ನು ಬೀಫ್‌ ಸ್ಯಾಂಡ್‌ವಿಚ್ ಮಾದರಿಯಲ್ಲಿ ತಯಾರು ಮಾಡಲಾಗಿದೆ. ಇದರಲ್ಲಿ ಬೇಯಿಸಿದ ಆಲೂಗಡ್ಡೆ, ಬಟಾಣಿ, ಮಸಾಲೆ ಪುಡಿಗಳು ಮತ್ತು ಬ್ರೆಡ್ ಕ್ರಂಬ್ಸ್ ಬಳಕೆ ಮಾಡಲಾಗಿದೆ. ಬೆಣ್ಣೆ, ಚೀಸ್ ಸ್ಲೈಸ್, ಈರುಳ್ಳಿ ಮತ್ತು ಟೊಮೆಟೊಗಳನ್ನು ಬಳಸಲಾಗಿದೆ.

ADVERTISEMENT

ಸದ್ಯ ಈ ಬರ್ಗರ್‌ಗೆ ತೆರಿಗೆ ಸೇರಿಸಿ ಇದರ ಬೆಲೆ ₹‌17,785 ಆಗುತ್ತದೆ. ಇದನ್ನು ಅಲ್ಲಿನ ಪ್ರಮುಖ ಶ್ರೀಮಂತರು ಖರೀದಿ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.